Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಷೇರು ಮಾರುಕಟ್ಟೆ ಪತನ: ಯುದ್ಧದ ಭೀತಿಯಿಂದ ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

Spread the love

ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಐದನೇ ವಾರಕ್ಕೆ ತಲುಪಿರುವುದು ಮತ್ತು ಕದನ ವಿರಾಮ ಅಸಂಭವವೆನ್ನುವ ಸ್ಥಿತಿಗೆ ತಲುಪಿರುವುದರಿಂದ ಕಚ್ಚಾ ತೈಲ ಬೆಲೆಗಳು ಏರಿಕೆಯಲ್ಲೇ ಇದ್ದ ಪರಿಣಾಮವಾಗಿ ಸೋಮವಾರ ಭಾರತದ ಬೆಂಚ್ಚಾರ್ಕ್ ಷೇರು ಸೂಚ್ಯಂಕಗಳು ಶೇ 1ಕ್ಕೂ ಮೀರಿ ಕುಸಿತ ಕಂಡಿವೆ.
ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ ಮತ್ತು ನಿಫ್ಟಿ ಎರಡೂ ಶೇ 1.1ರಷ್ಟು ಕುಸಿದವು. ಲೋಹಗಳು, ತೈಲ ಮತ್ತು ಅನಿಲ ಹೊರತುಪಡಿಸಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಎಲ್ಲಾ ಇತರ ವಲಯ ಸೂಚ್ಯಂಕಗಳು ಕುಸಿತದಲ್ಲಿವೆ. ಮಾರುಕಟ್ಟೆಯ ಚಂಚಲತೆಯ ಅಳತೆಯಾದ ‘ಇಂಡಿಯಾ ವಿಐಎಕ್ಸ್ ಕೊರೊನಾ ಸಾಂಕ್ರಾಮಿಕ ರೋಗದ ನಂತರದ ಅತ್ಯುನ್ನತ ಮಟ್ಟ ಶೇ 6ಕ್ಕೆ ಏರಿದೆ.

ಕುಸಿದ ಬಿಎಸ್‌ಇ ಮತ್ತು ನಿಫ್ಟಿ ಷೇರುಗಳು
ಬಿಎಸ್‌ಇಯ 30 ಷೇರುಗಳ ಸೂಚ್ಯಂಕದ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕಗಳ ಕುಸಿತ ಕಂಡಿದ್ದು 72,391.98 ಕ್ಕೆ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಕುಸಿತದ ಪ್ರವೃತ್ತಿ ತೋರಿಸುತ್ತಿದ್ದು ಇಂದು ತೀವ್ರಗೊಂಡಿದೆ. 50 ಷೇರುಗಳ ಎನ್‌ಎಸ್‌ಇಯ ನಿಫ್ಟಿ 349.45 ಅಂಕಗಳ ಕುಸಿತ ಕಂಡು 22,470.15 ಕ್ಕೆ ತಲುಪಿದೆ.
30 ಷೇರುಗಳ ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕಂಪನಿಗಳ ಷೇರುಗಳು ಗಮನಾರ್ಹವಾಗಿ ಕುಸಿದಿವೆ. ಇನ್ನೊಂದೆಡೆ, ಭಾರತ್ ಎಲೆಕ್ಟ್ರಾನಿಕ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಟಾಟಾ ಕನ್ಸಲ್ವೆನ್ಸಿ ಸರ್ವೀಸಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕಂಪನಿಗಳ ಷೇರುಗಳು ಏರಿಕೆ, ಕಂಡು ಮಾರುಕಟ್ಟೆಗೆ ಸ್ವಲ್ಪ ಮಟ್ಟಿನ ನಿರಾಳ ನೀಡಿವೆ.

ಕುಸಿದ ಅಮೆರಿಕ ಮತ್ತು ಏಷ್ಯಾದ ಮಾರುಕಟ್ಟೆಗಳು
ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಜಪಾನ್‌ನ ನಿಕ್ಕಿ 225 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಕೂಡ ಕುಸಿತ ಕಂಡಿದ್ದು, ಜಾಗತಿಕ ಹೂಡಿಕೆದಾರರ ಮನಸ್ಥಿತಿ ನಕಾರಾತ್ಮಕವಾಗಿರುವುದನ್ನು ತೋರಿಸುತ್ತಿವೆ. ಆದರೆ, ಶಾಂಫೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕವು ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ.
ಈ ನಡುವೆ ಅಮೆರಿಕದ ಷೇರು ಮಾರುಕಟ್ಟೆಯೂ ಶುಕ್ರವಾರ ಭಾರೀ ಕುಸಿತ ಕಂಡಿದ್ದು, ನಾಸ್ಟಾಕ್ ಕಾಂಪೋಸಿಟ್‌ ಸೂಚ್ಯಂಕ ಶೇ 2.15 ರಷ್ಟು ಕುಸಿದರೆ, ಡೌ ಜೋನ್ಸ್ ಕೈಗಾರಿಕಾ ಸರಾಸರಿ ಶೇ 1.73 ರಷ್ಟು ಮತ್ತು ಎಸ್ & ಪಿ 500 ಶೇ 1.67 ರಷ್ಟು ಕುಸಿದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಕುಸಿದಿರುವುದು ಸ್ಪಷ್ಟವಾಗಿದೆ.

ಶೇ 6ಕ್ಕೇರಿದ ಅಲ್ಯುಮಿನಿಯಂ ಬೆಲೆಗಳು
ಪಶ್ಚಿಮ ಏಷ್ಯಾದ ಎರಡು ದೊಡ್ಡ ಲೋಹದ ಉತ್ಪಾದಕರ ಒಡೆತನ ಅಲ್ಯುಮಿನಿಯಂ ಸೆಲ್ವರ್ಗಳು ವಾರಾಂತ್ಯದಲ್ಲಿ ಇರಾನ್ನಿಂದ ನಡೆದ ದಾಳಿಯಲ್ಲಿ ಹಾನಿಗೊಳಗಾದ ನಂತರ ಎನ್‌ಎಸ್‌ಇಯ ಲೋಹ ಸೂಚ್ಯಂಕವು ಲಾಭಗಳಿಸಿತು. ಸೋಮವಾರ ಇನ್ನೂ ಶೇ 0.5ರಷ್ಟು ಹೆಚ್ಚು ವಹಿವಾಟು ನಡೆಸುತ್ತಿದೆ. ಅಲ್ಯುಮಿನಿಯಂ ಬೆಲೆಗಳು ನಾಲ್ಕು ವರ್ಷಗಳ ಗರಿಷ್ಠ ಮಟ್ಟ ಶೇ 6ಕ್ಕೇರಿದೆ. ಯೆಮನ್ನಲ್ಲಿರುವ ಇರಾನ್ ಬೆಂಬಲಿತ ಹೌತಿ ಗುಂಪು ಇಸ್ರೇಲ್ ಮೇಲೆ ದಾಳಿ ನಡೆಸಿದ ಕಾರಣದಿಂದ ಸೋಮವಾರ ಅಲ್ಲಿನ ಮಾರುಕಟ್ಟೆ ಕುಸಿತಗೊಂಡಿದೆ. ಇರಾನ್ ಕೂಡ ಈ ಪ್ರದೇಶದಾದ್ಯಂತ ವಿವಿಧ ತಾಣಗಳಲ್ಲಿ ದಾಳಿ ಮುಂದುವರಿಸಿದೆ.
ಡಾಲರ್ ವಿರುದ್ಧ ಬಲಪಡೆದ ರೂಪಾಯಿ
ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತಡರಾತ್ರಿ ಭಾರತೀಯ ಕರೆನ್ಸಿಯ ವಿರುದ್ಧ ಊಹಾತ್ಮಕ ಪಂತಗಳನ್ನು ಹಾಕುವ ಬ್ಯಾಂಕುಗಳ ಸಾಮರ್ಥ್ಯವನ್ನು ಮಿತಿಗೊಳಿಸುವ ಮಾನದಂಡಗಳಲ್ಲಿ ಬದಲಾವಣೆ ಘೋಷಿಸಿದ ನಂತರ ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ವಿರುದ್ಧ ಬಲಪಡೆದುಕೊಂಡಿದೆ.


Spread the love
Share:

administrator

Leave a Reply

Your email address will not be published. Required fields are marked *