Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಕ್ಕಳಾಟಕ್ಕೆ ಬಲಿಯಾಗುತ್ತಿತ್ತು ಬೈಕ್ ಸವಾರನ ಜೀವ: ಫ್ಲೈಓವರ್ ಮೇಲೆ ಭಯಾನಕ ದೃಶ್ಯ!

Spread the love

ನವದೆಹಲಿ: ಮಕ್ಕಳನ್ನು ಎಷ್ಟೇ ಮುದ್ದಿನಿಂದ ಬೆಳೆಸಿದರೂ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕೂಡ ಕಲಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಬಾಲಕನೊಬ್ಬ ಕಾರಿನಿಂದ ವಾಟರ್ ಬಲೂನ್ ಎಸೆದ ಪರಿಣಾಮ ಅದು ಬೈಕ್ ಸವಾರನಿಗೆ ತಾಕಿ, ಅವರು ಆಯತಪ್ಪಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋವನ್ನು ಮೊದಲು ದಿವ್ಯಾ ಟಂಡನ್ ಅವರು ಶೇರ್ ಮಾಡಿದ್ದರು.
ಬಾಲಕ ಮಾಡಿದ ಒಂದು ತಪ್ಪಿನಿಂದ ಜೀವವೇ ಹೋಗುವ ಸಾಧ್ಯತೆ ಇತ್ತು. ಮಾರ್ಚ್ 27 ರಂದು ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಯ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.ಅಪರಾಧ ಎಸಗಿದ ವಾಹನದ ಮೇಲೆ ಅಪಾಯಕಾರಿ ಚಾಲನೆ ಮತ್ತು ಕಾನೂನು ಉಲ್ಲಂಘನೆಗಾಗಿ ಮೋಟಾರ್‌ಸೈಕಲ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *