ಮಗುವಿನ ಪ್ರಾಣದ ಜೊತೆ ಕುಡುಕ ಪತಿಯ ಚೆಲ್ಲಾಟ: ರೌದ್ರಾವತಾರ ತಾಳಿದ ಪತ್ನಿ!

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಗುವನ್ನು ಹಿಡಿದು ಅಬ್ಬರದ ಸೆಳೆತಗಳಿದ್ದರು ಸಮುದ್ರಕ್ಕಿಳಿದ ಪತಿಗೆ ಪತ್ನಿಯೊಬ್ಬಳು ಕೂದಲು ಹಿಡಿದು ಬಿಸಿಯೇಟು ನೀಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ತನ್ನ ಮಗುವನ್ನು ಹಿಡಿದು ಅಬ್ಬರದ ಅಲೆಗಳಿದ್ದರು ಎತ್ತಿಕೊಂಡು ಹೋಗಿದ್ದಾನೆ.
ಮನೆಯವರು ಹೋಗಬೇಡ ಎಂದರು, ಮಗುವನ್ನು ಹಿಡಿದು ಅಲೆಗಳನ್ನು ಎಂಜಾಯ್ ಮಾಡಿದ್ದಾನೆ.
ಇದನ್ನು ನೋಡಿದ ಪತ್ನಿ ಹಿಂದೆ ಬರುವಂತೆ ಹೇಳಿದ್ದಾಳೆ. ವಾಪಾಸ್ಸು ಬರುತ್ತಿದ್ದ ಹಾಗೇ ಸಿಟ್ಟಿಗೆದ್ದ ಪತ್ನಿ, ಮಗುವನ್ನು ಪಡೆದ ಬಳಿಕ ಪತಿಯ ಕೂದಲು ಹಿಡಿದು ಎಳೆದಾಡಿದ್ದಾಳೆ. ಆದರೆ ಪತಿ ಮತ್ತೇ ಸಮುದ್ರದ ಕಡೆಯೇ ಹೋಗಿದ್ದಾನೆ.
ಈ ಘಟನೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.