Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರವಾಹ ಪರಿಹಾರ ಹಗರಣ: ಕೆಬಿಸಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಬಂಧನ

Spread the love

ಗ್ವಾಲಿಯರ್: 2011ರಲ್ಲಿ ಕೌನ್ ಬನೇಗಾ ಕರೋಡ್ ಪತಿ ದೂರದರ್ಶನ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರರೊಬ್ಬರನ್ನು ಪ್ರವಾಹ ಪರಿಹಾರಕ್ಕೆ ಮೀಸಲಿರಿಸಲಾಗಿದ್ದ 2.57 ಕೋ.ರೂ.ವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಗುರುವಾರ ಬಂಧಿಸಲಾಗಿದೆ.
2021ರಲ್ಲಿ ಇಲ್ಲಿನ ಬರೋಡಾ ತಹಶೀಲ್‌ನಲ್ಲಿ ನಡೆದ ಅಕ್ರಮಗಳ ಆರೋಪದಲ್ಲಿ ಅಮಿತಾ ಸಿಂಗ್ ತೋಮ‌ರ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನೆರೆಯ ಶಿವಪುರಿಯಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ಬರೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಅವನೀತ್ ಶರ್ಮಾ ನೇತೃತ್ವದ ತಂಡ ತೋಮ‌ರ್ ಅವರನ್ನು ಗ್ವಾಲಿಯರ್‌ನ ಚಂದ್ರವದ್ದಿ ನಾಕಾದಲ್ಲಿರುವ ಅವರ ನಿವಾಸದಿಂದ ಬಂಧಿಸಿತು. ತೋಮ‌ರ್ ವಿಜಯಪುರದ ತಹಶೀಲ್ದಾರ್ ಆಗಿದ್ದರು. ಆದರೆ, ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ತೋಮ‌ರ್ ಅವರನ್ನು ಬುಧವಾರ ತಹಶೀಲ್ದಾರ್ ಹುದ್ದೆಯಿಂದ ತೆಗೆದು ಹಾಕಿದರು” ಎಂದು ಅಧಿಕಾರಿ ತಿಳಿಸಿದ್ದಾರೆ.
ತೋಮ‌ರ್ ಅವರು ಇದಕ್ಕಿಂತ ಮೊದಲೇ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಎರಡೂ ನ್ಯಾಯಾಲಯಗಳು ತಿರಸ್ಕರಿಸಿದ್ದವು.


Spread the love
Share:

administrator

Leave a Reply

Your email address will not be published. Required fields are marked *