Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಠಾಣೆಯಲ್ಲೇ ಇಸ್ಪೀಟ್ ಆಡಿದ ಪೊಲೀಸರು – ವಿಡಿಯೋ ವೈರಲ್

Spread the love

ಠಾಣೆಯನ್ನೇ ಇಸ್ಪೀಟ್ ಅಡ್ಡೆ ಮಾಡಿಕೊಂಡ ಪೊಲೀಸರು.. ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಇದೆಂಥಾ ಅವಸ್ಥೆ? ಭಾರೀ ಆಕ್ರೋಶ!

ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ವಾಡಿ ಪೊಲೀಸ್ ಠಾಣೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಐವರು ಪೊಲೀಸ್ ಕಾನ್‌ಸ್ಟೇಬಲ್​ಗಳು ಇಸ್ಪೀಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಇದೆಂಥಾ ಪೊಲೀಸರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಖಾಕಿ ಬಟ್ಟೆಯಲ್ಲಿ ಇಬ್ಬರು ಹಾಗೂ ಸಾಮಾನ್ಯ ಬಟ್ಟೆ ಧರಿಸಿದ ಮೂವರು ಕಾನ್‌ಸ್ಟೇಬಲ್​ಗಳು ಇಸ್ಪೀಟ್ ಆಡುತ್ತಿರು ವಿಡಿಯೋ ವೈರಲ್​ ಆಗಿದೆ. ಪಕ್ಕದಲ್ಲಿಯೇ ಗುಟ್ಕಾ, ತಂಬಾಕು ಮತ್ತು ಸುಣ್ಣದ ಪ್ಯಾಕೇಟ್‌ಗಳು ಇರುವುದು ವಿಡಿಯೋದಲ್ಲಿ ಸೆರೆಯಾಗಿವೆ.

ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಕಾನ್​​ಸ್ಟೇಬಲ್​ ಒಬ್ಬರು, ವಿಡಿಯೋ ಮಾಡಬೇಡ ಎಂದು ಸನ್ನೆಯ ಮೂಲಕ ಸೂಚಿಸಿದ ದೃಶ್ಯವೂ ಸೆರೆಯಾಗಿದೆ. ಮೇಲಾಧಿಕಾರಿಗಳ ಅಂಜಿಕೆ-ಅಳುಕು ಇಲ್ಲದೆ ನಿರ್ಭಯವಾಗಿ ಇಸ್ಪೀಟ್ ಆಡುತ್ತಿರುವ ಪೊಲೀಸರು, ಕರ್ತವ್ಯ-ಜವಬ್ದಾರಿ ಮರೆತು ಬಿಟ್ಟಿದ್ದು, ಈ ಅವ್ಯವಸ್ಥೆಯನ್ನು ನೋಡಿದ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದ್ದು, ಇಸ್ಪೀಟ್ ಆಡಿದ ಪೊಲೀಸರ ಮೇಲೆ ಕೇಸ್​ ಹಾಕಿ, ಕೂಡಲೇ ಅರೆಸ್ಟ್​ ಮಾಡಿ ಎಂದು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *