Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತಮಿಳುನಾಡು ಚುನಾವಣೆ 2026: ಕಣದಿಂದ ಹಿಂದೆ ಸರಿದ ಕಮಲ್ ಹಾಸನ್ ಪಕ್ಷ; ಡಿಎಂಕೆ ಮೈತ್ರಿಗೆ ಬೆಂಬಲ

Spread the love

ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮಯ್ಯಂ (MNM) ಪಕ್ಷವು, ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ.
ಡಿಎಂಕೆ ಹಾಗೂ ಮೈತ್ರಿ ಪಕ್ಷಗಳು ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸಿ, ಮೈತ್ರಿಪಕ್ಷಗಳ ನಡುವಿನ ವಿಧಾನಸಭಾ ಕ್ಷೇತ್ರಗಳ ಹಂಚಿಕೆಯನ್ನು ಮಾಡಿಕೊಂಡಿದ್ದರೂ ಈ ಘೋಷಣೆ ಹೊರ ಬಿದ್ದಿದೆ.
“ಹಾಲಿ ಸವಾಲಿನ ರಾಜಕೀಯ ವಾತಾವರಣದಲ್ಲಿ ನಮಗೆ ನೀಡಲು ಮುಂದಾಗಿರುವ ಸ್ಥಾನಗಳ ಸಂಖ್ಯೆ ಹಾಗೂ ಉದಯಿಸುತ್ತಿರುವ ಸೂರ್ಯ ಚಿಹ್ನೆಯಡಿ ಸ್ಪರ್ಧಿಸುವಂತೆ ನೀಡಿರುವ ಪ್ರಸ್ತಾವ ನನಗಾಗಲಿ ಅಥವಾ ನಮ್ಮ ಪಕ್ಷದ ಸದಸ್ಯರಿಗಾಗಲಿ ಸ್ವೀಕಾರಾರ್ಹವಲ್ಲ” ಎಂದು ಕಮಲ್ ಹಾಸನ್ ಹೇಳಿದ್ದಾರೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚುನಾವಣಾ ಕಣದಿಂದ ದೂರವುಳಿಯಲು ನಮ್ಮ ಪಕ್ಷವು ಸ್ಪಷ್ಟ ನಿಲುವು ತಳೆದಿದೆ ಎಂದೂ ಅವರು ಹೇಳಿದ್ದಾರೆ.
ಹೀಗಾಗಿ, ಮಕ್ಕಳ್ ನೀದಿ ಮೈಯ್ಯಂ ಪಕ್ಷವು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮುಕ್ತವಾಗಿ ಹಾಗೂ ಸ್ಪಷ್ಟವಾಗಿ ಘೋಷಿಸುತ್ತಿದ್ದೇವೆ. ಅದರ ಬದಲು ನಾವು ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲವನ್ನು ನೀಡಲಿದ್ದೇವೆ” ಎಂದು ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿರುವ ಕಮಲ್ ಹಾಸನ್, ನಿಮ್ಮ ಭಾವನೆಗಳು ಹಾಗೂ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಮ್ಮಲ್ಲಿನ ಪ್ರತಿಯೊಬ್ಬರೂ ನಿಸ್ವಾರ್ಥ ರಾಜಕಾರಣಕ್ಕೆ ಹೊಳೆಯುವ ನಿದರ್ಶನವಾಗಿದ್ದೀರಿ. ನಿಮ್ಮ ಭಾವನೆಗಳು ಹಾಗೂ ನಿಮ್ಮ ವಿಶ್ವಾಸಕ್ಕೆ ಗೌರವದ ದ್ಯೋತಕವಾಗಿ ಈ ನಿರ್ಧಾರ ಕೈಗೊಳ್ಳವಲಾಗಿದೆ” ಎಂದು ಹೇಳಿದ್ದಾರೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *