ಇರಾನ್ ಪರಮಾಣು ಸ್ಥಾವರದ ಮೇಲೆ ಮತ್ತೆ ದಾಳಿ: ನತಾಂಝ್ ಗುರಿಯಾಗಿಸಿದ ಅಮೆರಿಕ-ಇಸ್ರೇಲ್ ಪಡೆಗಳು

ಟೆಹ್ರಾನ್ : ಇರಾನ್‌ನ ನತಾಂಝ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಮತ್ತೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಇರಾನ್‌ನ ತಸ್ಲಿಮ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಶನಿವಾರ ಬೆಳಿಗ್ಗೆ ನತಾಂಝ್ ಪರಮಾಣು ಸ್ಥಾವರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ದಾಳಿಯಿಂದ ಪರಮಾಣು ಸ್ಥಾವರದ ಸಂಕೀರ್ಣದಲ್ಲಿ ಯಾವುದೇ ಸೋರಿಕೆ ವರದಿಯಾಗಿಲ್ಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಯಾವುದೇ ಅಪಾಯವಿಲ್ಲ ಎಂದು ವರದಿಯು ತಿಳಿಸಿದೆ.
