Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

8 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿ ದಿಲ್ಲಿಗೆ ಮರಳಿದ ಏರ್ ಇಂಡಿಯಾ ವಿಮಾನ

Spread the love

ಹೊಸದಿಲ್ಲಿ: ವ್ಯಾಂಕೋವರ್ ಗೆ ಹೊರಟ ಏರ್ ಇಂಡಿಯಾ ವಿಮಾನವು ಮಧ್ಯ ಆಕಾಶದಲ್ಲಿಯೇ ಯೂಟರ್ನ್ ಹೊಡೆದು ಹಿಂತಿರುಗಿದ ಅಚ್ಚರಿಯ ಘಟನೆ ನಡೆದಿದೆ. ಕೆನಡಾ ಪ್ರವೇಶಕ್ಕೆ ಅನುಮತಿ ಇಲ್ಲದ ವಿಮಾನವನ್ನು ತಪ್ಪಾಗಿ ಟೇಕ್‌ಆಫ್ ಮಾಡಿದ್ದರಿಂದ, ವಿಮಾನವು ಸುಮಾರು ಎಂಟು ಗಂಟೆಗಳ ಕಾಲ ಆಕಾಶದಲ್ಲಿಯೇ ಹಾರಾಡಿ ದಿಲ್ಲಿಗೆ ಮರಳಿತು.
AI185 ವಿಮಾನವು ಬೆಳಿಗ್ಗೆ 11:34ಕ್ಕೆ ದಿಲ್ಲಿಯಿಂದ ಹೊರಟು ಪೂರ್ವ ದಿಕ್ಕಿನಲ್ಲಿ ತನ್ನ ಪ್ರಯಾಣ ಆರಂಭಿಸಿತು. ಆದರೆ, ಸುಮಾರು ನಾಲ್ಕು ಗಂಟೆಗಳ ನಂತರ ಚೀನಾದ ಕುನ್ನಿಂಗ್ ಸಮೀಪದ ವಾಯುಪ್ರದೇಶ ಪ್ರವೇಶಿಸಿದಾಗ, ಈ ವಿಮಾನಕ್ಕೆ ಕೆನಡಾದಲ್ಲಿ ಹಾರಾಟ ನಡೆಸಲು ಅನುಮತಿ ಇಲ್ಲ ಎಂಬ ಮಾಹಿತಿ ಬಹಿರಂಗವಾಯಿತು.
ತಕ್ಷಣವೇ ಎಚ್ಚೆತ್ತುಕೊಂಡ ಏರ್ ಇಂಡಿಯಾ, ವಿಮಾನವನ್ನು ಹಿಂತಿರುಗಿಸುವ ನಿರ್ಧಾರ ಕೈಗೊಂಡಿತು. ಪರಿಣಾಮವಾಗಿ ಸುಮಾರು 7 ಗಂಟೆ 54 ನಿಮಿಷಗಳ ಹಾರಾಟದ ಬಳಿಕ ವಿಮಾನವು ಸುರಕ್ಷಿತವಾಗಿ ದೆಹಲಿಗೆ ಇಳಿಯಿತು.
ಈ ಹಾರಾಟಕ್ಕೆ ಬಳಸಿದದ್ದು ಬೋಯಿಂಗ್ 777-200LR ಮಾದರಿಯ ವಿಮಾನ. ಆದರೆ, ಕೆನಡಾ ಮಾರ್ಗಗಳಲ್ಲಿ ಏರ್ ಇಂಡಿಯಾಗೆ ಕೇವಲ ಬೋಯಿಂಗ್ 777-300ER ವಿಮಾನಗಳನ್ನು ಮಾತ್ರ ಬಳಸಲು ಅನುಮತಿ ಇದೆ. ದೇಶವಾರು ವಾಯುಯಾನ ನಿಯಮಗಳು ವಿಮಾನ ಮಾದರಿ ಹಾಗೂ ಪ್ರತ್ಯೇಕ ವಿಮಾನಗಳ ಆಧಾರದ ಮೇಲೆ ಬದಲಾಗುತ್ತವೆ.
ಘಟನೆ ಕುರಿತು ಏ‌ರ್ ಇಂಡಿಯಾ ಸ್ಪಷ್ಟನೆ ನೀಡಿದ್ದು ‘ಕಾರ್ಯಾಚರಣಾ ಸಮಸ್ಯೆಯ ಹಿನ್ನೆಲೆಯಲ್ಲಿ ವಿಮಾನವನ್ನು ಹಿಂದಿರುಗಿಸಲಾಗಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ’ ಎಂದು ತಿಳಿಸಿದೆ.
ದಿಲ್ಲಿಯಲ್ಲಿ ಪ್ರಯಾಣಿಕರಿಗೆ ಹೋಟೆಲ್ ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಪರ್ಯಾಯ ಹಾರಾಟಗಳ ಮೂಲಕ ಅವರನ್ನು ಗಮ್ಯಸ್ಥಾನಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರ, ವಿಮಾನವು ಮರುದಿನ ಮತ್ತೆ ಪ್ರಯಾಣ ಆರಂಭಿಸಿದೆ.
ಗಂಟೆಗೆ ಸುಮಾರು 8ರಿಂದ 9 ಟನ್‌ ಇಂಧನ ಬಳಸುವ ಬೋಯಿಂಗ್ 777 ವಿಮಾನದ ಈ ಎಲ್ಲಿಗೂ ತಲುಪದೇ ವಾಪಸ್ಸಾದ ವಿಮಾನಯಾನವು ಏರ್ ಇಂಡಿಯಾ ಸಂಸ್ಥೆಗೆ ಆರ್ಥಿಕ ಹೊರೆ ಹೆಚ್ಚಿಸುವ ಸಾಧ್ಯತೆಯಿದೆ


Spread the love
Share:

administrator

Leave a Reply

Your email address will not be published. Required fields are marked *