Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯೋಗ ಫೌಂಡೇಷನ್ ಹೆಸರಲ್ಲಿ 2.9 ಕೋಟಿ ರೂ. ಖೋಟಾ ನೋಟು ದಂಧೆ: ‘ಪ್ರದೀಪ್ ಗುರೂಜಿ’ ಸೇರಿ ಆರು ಮಂದಿ ಅರೆಸ್ಟ್

Spread the love

ಅಹಮದಾಬಾದ್‌: ಅಧ್ಯಾತ್ಮಿಕ ಚಟುವಟಿಕೆಗಳ ಸೋಗಿನಲ್ಲಿ ಕಾರ್ಯಾಚರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದು ಪ್ರಮುಖ ಆರೋಪಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2.9 ಕೋಟಿ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಮರಾಯಿವಾಡಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಖೋಟಾ ನೋಟುಗಳು ಚಲಾವಣೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿದರು. ರಾತ್ರಿ ಪೂರ್ತಿ ಕಟ್ಟೆಚ್ಚರ ವಹಿಸಿದ್ದ ತಂಡಗಳು ಸಂಶಯಾಸ್ಪದ ಚಲನವಲನಗಳನ್ನು ಗಮನಿಸಿ, ಶಂಕಿತರನ್ನು ಅಡ್ಡಗಟ್ಟಿ ಬಂಧಿಸಿವೆ.
ತನಿಖೆಯ ವೇಳೆ ‘ಸತ್ಯಂ ಯೋಗ ಫೌಂಡೇಷನ್‌ಗೆ ಸಂಬಂಧಿಸಿದ ವಾಹನದಲ್ಲಿ ಖೋಟಾ ನೋಟುಗಳನ್ನು ಸಾಗಣೆ ಮಾಡಲಾಗುತ್ತಿರುವುದು ಪತ್ತೆಯಾಯಿತು. ವಾಹನದ ಮೇಲೆ ಭಾರತ ಸರ್ಕಾರ ಹಾಗೂ ಆಯುಷ್ ಸಚಿವಾಲಯದ ಚಿಹ್ನೆಗಳನ್ನು ಅಂಟಿಸಲಾಗಿದ್ದು, ಶಂಕೆಯಿಂದ ತಪ್ಪಿಸಿಕೊಳ್ಳಲು ಹಾಗೂ ನಿರ್ಬಂಧವಿಲ್ಲದೆ ಸಂಚರಿಸಲು ಅವುಗಳನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಬಳಿಯಿಂದ ಮೊದಲ ಹಂತದಲ್ಲಿ 2 ಕೋಟಿ ರೂಪಾಯಿ ಮೌಲ್ಯದ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ತನಿಖೆಯನ್ನು ವಿಸ್ತರಿಸಿದ ಪೊಲೀಸರು, ಸೂರತ್ ಪೊಲೀಸರ ಸಮನ್ವಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇನ್ನೂ 80 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಪತ್ತೆಹಚ್ಚಿದರು. ಈ ಮೂಲಕ ಒಟ್ಟು ವಶಪಡಿಸಿಕೊಂಡ ಮೊತ್ತ 2.9 ಕೋಟಿ ರ. ಗೆ ಏರಿಕೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್ ಜೊಟಾಂಗಿಯಾ ಅಲಿಯಾಸ್ ‘ಪ್ರದೀಪ್ ಗುರೂಜಿ’ಯನ್ನು ಬಂಧಿಸಲಾಗಿದ್ದು, ಆತನೇ ಈ ಜಾಲದ ‘ಕಿಂಗ್‌ಪಿನ್ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಧ್ಯಾತ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ಜಾಲವನ್ನು ನಡೆಸಿ ಖೋಟಾ ನೋಟುಗಳ ವಿತರಣೆ ಮಾಡುತ್ತಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಜಾಲವು ಅಹಮದಾಬಾದ್ ನಿಂದ ಸೂರತ್ ವರೆಗೆ ವಿಸ್ತರಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *