Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

NEET PG 2025 ಎರಡು ಶಿಫ್ಟ್ ನಿರ್ಧಾರಕ್ಕೆ ವಿರೋಧ

Spread the love

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ (NBEMS) ಜೂನ್ 15, 2025ರಂದು NEET PG 2025 ಪರೀಕ್ಷೆಯನ್ನು ಎರಡು ಶಿಫ್ಟ್‌ನಲ್ಲಿ ನಡೆಸುವ ನಿರ್ಧಾರ ಪ್ರಕಟಿಸಿದೆ. ಈ ತೀರ್ಮಾನ ವೈದ್ಯಕೀಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪರೀಕ್ಷೆಯ ವೇಳಾಪಟ್ಟಿ:

ಶಿಫ್ಟ್ 1: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:30
ಶಿಫ್ಟ್ 2: ಮಧ್ಯಾಹ್ನ 3:30 ರಿಂದ ಸಂಜೆ 7:00
NBEMS ಈ ತೀರ್ಮಾನವನ್ನು ಮಾರ್ಚ್ 17ರಂದು ಅಧಿಕೃತವಾಗಿ ಘೋಷಿಸಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ ನಡೆಯಲಿದೆ. ಆದರೆ, ಕಳೆದ ಬಾರಿ ನಡೆದ Normalization ಪ್ರಕ್ರಿಯೆಯಿಂದಾದ ಸಮಸ್ಯೆಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳ ಆಕ್ರೋಶ:

Normalization ವಿಧಾನದಲ್ಲಿ ತಪ್ಪುಗಳು: ವಿದ್ಯಾರ್ಥಿಗಳು ಕಳೆದ ವರ್ಷ ಅನುಭವಿಸಿದ ಅಸಮಾನತೆಗಳು ಪುನರಾವೃತ್ತಿಯಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಒಂದು ರಾಷ್ಟ್ರ ಒಂದು ಚುನಾವಣೆ ಸಾಧ್ಯ, ಆದರೆ ಒಂದು ರಾಷ್ಟ್ರ ಒಂದು ಪರೀಕ್ಷೆ ಸಾಧ್ಯವಿಲ್ಲವೇ?” ಎಂದು ವೈದ್ಯರು ಟೀಕಿಸಿದ್ದಾರೆ.
“NBEMS ಹಾಳುಮಾಡಿದNormalization ಪದ್ಧತಿಯನ್ನು ಮತ್ತೆ ಪುನರಾವರ್ತಿಸುತ್ತಿದೆ!” ಎಂದು ಮತ್ತೊಬ್ಬ ವೈದ್ಯ ಟೀಕಿಸಿದ್ದಾರೆ.
Normalization ಎಂಬುದನ್ನು ನಿರ್ದಿಷ್ಟ ಗಣಿತ ಸೂತ್ರಗಳ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ವಿವರಿಸಿದ್ದಾರೆ.


NBEMS ನಿರ್ಧಾರದ ವಿರುದ್ಧ ಒತ್ತಡ:
ಯುನಿಫೈಡ್ ಡಾಕ್ಟರ್ಸ್ ಫ್ರಂಟ್ (UDF) ಕೇಂದ್ರ ಆರೋಗ್ಯ ಸಚಿವ ಜೇ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಪರೀಕ್ಷೆಯನ್ನು ಒಂದು ಶಿಫ್ಟ್‌ನಲ್ಲಿ ನಡೆಸುವಂತೆ ಒತ್ತಾಯಿಸಿದೆ. NBEMS ಈ ಕುರಿತು ಸ್ಪಷ್ಟನೆ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *