Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಡಿಶಾದಲ್ಲಿ ಸುಂಟರಗಾಳಿ ಅಟ್ಟಹಾಸ: ಗಾಳಿಯಲ್ಲಿ ಹಾರಿಹೋದ ಜನ, ವಾಹನಗಳು; ಇಬ್ಬರ ಬಲಿ!

Spread the love

ಒಡಿಶಾದಲ್ಲಿ ರಣ ಭೀಕರ ಸುಂಟರಗಾಳಿ ಇಬ್ಬರನ್ನು ಬಲಿ ಪಡೆದಿದ್ದು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಈ ಘಟನೆಯ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ನಿನ್ನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಕಾರಂಜಿಯಾ ಬ್ಲಾಕ್‌ನ ನಾಲ್ಕು ಗ್ರಾಮಗಳಿಗೆ ಭಾನುವಾರ ನಾರ್ವೆಸ್ಟರ್ ಚಂಡಮಾರುತ ಅಪ್ಪಳಿಸಿದ ಪರಿಣಾ ಹಲವಾರು ಮನೆಗಳಿಗೆ ಹಾನಿಯುಂಟು ಮಾಡಿದ್ದು, ಈ ನೈಸರ್ಗಿಕ ವೈಪರೀತ್ಯದಲ್ಲಿ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 29 ಜನರು ಗಾಯಗೊಂಡಿದ್ದಾರೆ.

ಮೃತರನ್ನು ಕಿಯೋಂಜಾರ್ ಜಿಲ್ಲೆಯ ಪೊಲೀಸ್ ನಾಯಕ್ (45) ಮತ್ತು ಕಾರಂಜಿಯಾ ಬ್ಲಾಕ್‌ನ ಟಾಟೊದ ಮಾಲತಿ ಮೊಹಂತ (50) ಎಂದು ಗುರುತಿಸಲಾಗಿದೆ. ಇವರು ಸಂಜೆ 4.30 ರ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಸುಂಟರಗಾಳಿ ಕಾಣಿಸಿಕೊಂಡಿದ್ದು, ಅದಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಮೃತರಾದವರ ಹತ್ತಿರದ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದಾರೆ.
ಗಾಯಗೊಂಡ 23 ಜನರು ಕಾರಂಜಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಗಂಭೀರ ಸ್ಥಿತಿಯಲ್ಲಿರುವ ಆರು ಮಂದಿಯನ್ನು ಕಿಯೋಂಜಾರ್‌ನ ಧರಣಿಧರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಳಿಗೆ ಹಾರಿ ಹೋದ್ರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನ, ವಾಹನಗಳು
ಕಾರಂಜಿಯಾ ಬ್ಲಾಕ್‌ನ ಕಿಯಾ, ಕಂಕಡ, ಪಾನಿಪೋಸಿ ಮತ್ತು ಡುಮುರಿಯಾ ಗ್ರಾಮಗಳು ನಾರ್ತ್‌ವೆಸ್ಟರ್ ಬಿರುಗಾಳಿ ಮತ್ತು ಸುಂಟರಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಹಠಾತ್ ಸಂಭವಿಸಿದ ಸುಂಟರಗಾಳಿಯಿಂದ ಈ ಪ್ರದೇಶದಲ್ಲಿ ಭೀತಿ ಹುಟ್ಟಿಕೊಂಡಿದ್ದು, ಮೂರು ಮೋಟಾರ್ ಸೈಕಲ್‌ಗಳು ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ಸಹ ಈ ಭೀಕರ ಗಾಳಿಗೆ ಹಾರಿಹೋಗಿದ್ದು, ಕೆಲವು ಮರಗಳು ಬುಡಮೇಲಾಗಿವೆಮಯೂರ್‌ಭಂಜ್ ಜಿಲ್ಲಾಧಿಕಾರಿ ಹೇಮಕಾಂತ ಸೇ ಅವರು ಈ ಸುಂಟರಗಾಳಿಯಿಂದ ಸಂತ್ರಸ್ತರಾದವರಿಗೆ ಬೇಯಿಸಿದ ಆಹಾರವನ್ನು ನೀಡಲಾಗುವುದು, ವಿಪತ್ತಿನಲ್ಲಿ ಮನೆ ಕಳೆದುಕೊಂಡ ಜನರಿಗೆ ಅಗತ್ಯ ಸಹಾಯ ನೀಡಲಾಗುವುದು ಎಂದು ಅವರು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *