Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಳ್ಳರ ‘ಸ್ಮಾರ್ಟ್’ ಕೆಲಸ: ಲೈಟ್ ಆಫ್ ಮಾಡೋಕೆ ಹೋಗಿ ಕಾಲಿಂಗ್ ಬೆಲ್ ಒತ್ತಿದ ಕಿಲಾಡಿಗಳು!

Spread the love

ಕಳ್ಳತನಕ್ಕೆ ಯತ್ನಿಸುವ ವೇಳೆ ಕಳ್ಳರು ಸಿಕ್ಕಿ ಬೀಳದೇ ಇರುವುದಕ್ಕೆ ಎಷ್ಟು ಜಾಗರೂಕವಾಗಿರಲು ಸಾಧ್ಯವೋ ಅಷ್ಟು ಜಾಗರೂಕರಾಗಿರುತ್ತಾರೆ. ಕೆಲವು ಕಳ್ಳರು ಸಿಕ್ಕಿಬಿದ್ದರೂ ತಪ್ಪಿಸಿಕೊಳ್ಳಲು ಸುಲಭವಾಗಬೇಕು ಎಂದು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಅರೆಬೆತ್ತಲಾಗಿ ಕಳ್ಳತನಕ್ಕೆ ಹೋಗುವುದುಂಟು. ಆದರೆ ಇಲ್ಲೊಂದು ಕಡೆ ಕಳ್ಳರು ಮನೆಯ ಕಾಲಿಂಗ್ ಬೆಲ್‌ ಅನ್ನೇ ಒತ್ತಿದ್ದು, ತಾವೇ ಮನೆಯವರು ಎಚ್ಚರಗೊಳ್ಳುವಂತೆ ಮಾಡಿದ್ದಾರೆ.ಕಾಲಿಂಗ್ ಬೆಲ್ ಒತ್ತಿದ ಕಳ್ಳರು
ಬೈಕ್ ಕಳ್ಳತನಕ್ಕೆಂದು ಮುಖವಾಡ ಧರಿಸಿ ಬಂದ ಇಬ್ಬರು ಕಳ್ಳರು ಮನೆ ಮುಂದೆ ನಿಧಾನವಾಗಿ ಕಳ್ಳ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಈ ವೇಳೆ ಮನೆ ಮುಂದೆ ಲೈಟ್ ಬೆಳಗುತ್ತಿದ್ದು, ಇದನ್ನು ಆಫ್ ಮಾಡುವುದಕ್ಕೆ ಕಳ್ಳರು ಮುಂದಾಗಿದ್ದಾರೆ. ಅದಕ್ಕಾಗಿ ಮನೆ ಮುಂದಿದ್ದ ಕಾಲಿಂಗ್ ಬೆಲ್ ಸ್ವಿಚ್ ಅನ್ನೇ ಲೈಟ್ ಆಫ್ ಮಾಡುವ ಸ್ವಿಚ್ ಎಂದು ಭಾವಿಸಿದ ಕಳ್ಳರು ಅದನ್ನೇ ಒತ್ತಿದ್ದಾರೆ. ಆದರೆ ಅದು ಕಾಲಿಂಗ್ ಬೆಲ್ ಆಗಿದ್ದು, ಮನೆಯೊಳಗೆ ಜೋರಾಗಿ ಸದ್ದು ಮಾಡಿದೆ. ಇದರಿಂದ ಮನೆ ಮಂದಿ ಎಚ್ಚೆತ್ತುಕೊಂಡಿದ್ದು, ಇತ್ತ ಕಳ್ಳರು ಕಾಲಿಗೆ ಬುದ್ಧಿ ಹೇಳಿದ್ದಾರೆ.ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಮನೆ ಮುಂದಿನ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳರ ಈ ಕಳ್ಳಾಟ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕೆಲ ವರದಿಗಳ ಪ್ರಕಾರ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನಕ್ಕೆ ಬಂದಿದ್ದರು ಎಂಬ ಮಾಹಿತಿ ಇದೆ. ವೀಡಿಯೋದಲ್ಲಿ ಕಾಣುವಂತೆ ಇಬ್ಬರು ಈ ಕಳ್ಳತನದ ಕೃತ್ಯಕ್ಕೆ ಬಂದಿದ್ದು, ಅದರಲ್ಲೊಬ್ಬ ಬೈಕ್ ಸಮೀಪ ಬಂದು ಬೈಕ್‌ನ್ನು ಹೇಗೆ ಎಗರಿಸುವುದು ಎಂದು ನೋಡುತ್ತಿದ್ದರೆ ಮತ್ತೊಬ್ಬ ಲೈಟ್ ಆಫ್ ಮಾಡುವುದಕ್ಕೆ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದಾನೆ. ಇದರಿಂದ ಕಾಲಿಂಗ್ ಬೆಲ್ ಜೋರಾಗಿ ಹೊಡೆದುಕೊಂಡಿದ್ದು, ಬೈಕ್ ಮುಂದಿದ್ದ ಕಳ್ಳ ಹಾಗೂ ಮತ್ತೊಬ್ಬ ಇಬ್ಬರು ಕೇವಲ ಕೆಲ ಸೆಕೆಂಡ್‌ಗಳಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.ಕಳ್ಳರ ಕಿತಾಪತಿಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇದು ತರಬೇತಿ ಅವಧಿ, ಅವರು ತಪ್ಪಿನಿಂದ ಪಾಠ ಕಲಿಯುತ್ತಿದ್ದಾರೆ ನೆಕ್ಸ್ಟ್ ಟೈಮ್ ಹಾಗೆ ಮಾಡಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಇದು ಇವರ ಕೆಲಸದ ಮೊದಲ ದಿನ ಇರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಹೊಸಬರ ತಪ್ಪುಗಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಆ ಕಾಲಿಂಗ್ ಬೆಲ್ ಸ್ವಿಚ್‌ ಅನ್ನು ಮನೆ ಮಂದಿ ಬಹಳ ಸ್ಮಾರ್ಟ್ ಆಗಿ ಮಾಡಿಸಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈತ ಈ ತಪ್ಪಿಗಾಗಿ ಕೆಲಸ ಕಳೆದುಕೊಳ್ಳಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಹೇಯ್ ನೀನೆಂಥಾ ಕಳ್ಳ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *