Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖೋಮೇನ್ ನಗರದ ಬಾಲಕರ ಶಾಲೆಯ ಮೇಲೆ ವೈಮಾನಿಕ ದಾಳಿ; ಕಟ್ಟಡಕ್ಕೆ ಭಾರೀ ಹಾನಿ

Spread the love

ಖೋಮೇನ್: ಇರಾನ್ ನ ಖೋಮೇನ್ ನಗರದಲ್ಲಿನ ಶಾಹಿದ್ ಖೋಮೇನಿ ಬಾಲಕರ ಶಾಲೆಯ ಮೇಲೆ ಸೋಮವಾರ ಮುಂಜಾನೆ ವೈಮಾನಿಕ ದಾಳಿ ನಡೆದಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ ಎಂದು Aljazeera ಉಲ್ಲೇಖಿಸಿದೆ.
ದಾಳಿಯನ್ನು ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದೆ ಎಂದು ವಿವರಿಸಿರುವ ಫಾರ್ಸ್, ಘಟನೆಯ ನಂತರ ಶಾಲಾ ಕಟ್ಟಡವು ಹಾನಿಗೊಳಗಾಗಿರುವುದನ್ನು ತೋರಿಸುವ ಹಲವು ಫೋಟೋಗಳನ್ನು ಬಿಡುಗಡೆ ಮಾಡಿದೆ.
ನಂತರ ಮೆಹ‌ರ್ ಸುದ್ದಿ ಸಂಸ್ಥೆ ವರದಿ ಮಾಡಿದಂತೆ, ಇರಾನ್ ಮಾರ್ಕಾಜಿ ಪ್ರಾಂತ್ಯದ ಉಪ ಗವರ್ನರ್ ದಾಳಿಯನ್ನು ದೃಢಪಡಿಸಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಆದರೆ ದಾಳಿಯಿಂದ ಶಾಲೆಯ ಸುತ್ತಮುತ್ತಲಿನ ಹಲವು ಮನೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.
ಈ ನಡುವೆ, ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ, “ಖೋಮೇನ್ ನಲ್ಲಿ ಶಾಲೆಯ ಮೇಲೆ ವೈಮಾನಿಕ ದಾಳಿ” ಎಂಬ ಶೀರ್ಷಿಕೆಯೊಂದಿಗೆ ಫಾರ್ಸ್ ಸುದ್ದಿ ಸಂಸ್ಥೆ ಮೊದಲು ಹಂಚಿಕೊಂಡಿದ್ದ ಅದೇ ಫೋಟೋಗಳನ್ನು ಮರುಹಂಚಿಕೆ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *