ಅಲ್-ಖರ್ಜ್ ವಸತಿ ಕಟ್ಟಡದ ಮೇಲೆ ದಾಳಿ; ಮೃತರಲ್ಲಿ ಒಬ್ಬರು ಭಾರತೀಯ ಪ್ರಜೆ

ರಿಯಾದ್: ಸೌದಿ ಅರೇಬಿಯಾದ ಅಲ್-ಖರ್ಜ್ ನಲ್ಲಿ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರಲ್ಲಿ ಓರ್ವರು ಭಾರತೀಯ, ಮತ್ತೋರ್ವರು ಬಾಂಗ್ಲಾದೇಶದ ಪ್ರಜೆ ಎಂದು ಸೌದಿ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸಲ್ಲಿ ಪ್ರಕಟಿಸಿದ ಪೋಸ್ಟಲ್ಲಿ ನಾಗರಿಕ ರಕ್ಷಣಾ ಸಂಸ್ಥೆ ಮೃತರು ಭಾರತೀಯ ಮತ್ತು ಬಾಂಗ್ಲಾದೇಶದ ಪ್ರಜೆಗಳು ಎಂದು ಸ್ಪಷ್ಟಪಡಿಸಿದೆ.
ಸೌದಿ ಅರೇಬಿಯಾದ ಅಲ್-ಖರ್ಜ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ನ ಕ್ರಾಂತಿಕಾರಿ ಗಾರ್ಡ್ ಈ ಹಿಂದೆ ಹೇಳಿಕೆ ನೀಡಿತ್ತು.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ನಡೆಸಿದ ಬಳಿಕ, ಇರಾನಿನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆಯಾದ ಘಟನೆಯ ಬಳಿಕ ಗಲ್ಫ್ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಈ ಬೆಳವಣಿಗೆಯ ನಂತರ ಇರಾನ್, ಇಸ್ರೇಲ್ ನಲ್ಲಿನ ನೆಲೆಗಳ ಜೊತೆಗೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿತು.
