Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದುವೆ ಒತ್ತಡಕ್ಕೆ ಯುವತಿಯ ವಿಭಿನ್ನ ಪ್ರತಿರೋಧ: ಇಷ್ಟದ ಕೂದಲನ್ನೇ ಬೋಳಿಸಿಕೊಂಡು ಆಕ್ರೋಶ!

Spread the love

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಎಲ್ಲ ಅಡೆತಡೆಗಳನ್ನು ಮೀರಿ ಸಾಧನೆ ಮಾಡಿದ ಅನೇಕ ಮಹಿಳೆಯರನ್ನು ಇಂದು ಅನೇಕ ಕಾರ್ಯಕ್ರಮಗಳಲ್ಲಿ ಸನ್ಮಾನಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಇಂದಿಗೂ ಭಾರತದ ಬಹುತೇಕ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಬದುಕು ಬಹಳ ಶೋಚನೀಯವಾಗಿದೆ. ಚೆನ್ನಾಗಿ ಓದಿ ಉದ್ಯೋಗ ಗಳಿಸಿ ಯಾರ ಹಂಗಿಗೂ ಹೋಗದೇ ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರೂ ಮದುವೆಯ ವಿಷಯದಲ್ಲಿ ಭಾರತದಲ್ಲಿ ಮಹಿಳೆಯರಿಗೆ ಅವರಿಷ್ಟದಂತೆ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿಲ್ಲ, ಜೊತೆಗೆ ಮದುವೆಯಾಗುವಂತೆ ಬರುವ ಕುಟುಂಬದ ಒತ್ತಡ, ಸಮಾಜದ ಒತ್ತಡವನ್ನು ಅನುಭವಿಸದೇ ಇರುವವರೇ ಇಲ್ಲ ಅನೇಕರು ಕುಟುಂಬದ ಸಮಾಜದ ಈ ಒತ್ತಡಕ್ಕೆ ಸಿಲುಕಿ ಬದುಕನ್ನೇ ಕೊನೆಗೊಳಿಸಿದವರಿದ್ದಾರೆ. ಹಾಗೆಯೇ ಮದುವೆಯ ಒತ್ತಡದಿಂದ ಪಾರಾಗಿ ಬರಲು ಅನೇಕ ಹೆಣ್ಣು ಮಕ್ಕಳು ಮನೆ ಬಿಟ್ಟು ಓದಿ ಹೋಗಿ ಮತ್ತಿನೆಲ್ಲೋ ಅನಾಹುತಕ್ಕೆ ಸಿಲುಕಿದಂತಹ ಘಟನೆಗಳು ನಡೆದಿವೆ.

ಅದೇ ರೀತಿ ಇಲ್ಲೊಬ್ಬಳು ಯುವತಿ ಮದುವೆಯಿಂದ ಪಾರಾಗುವುದಕ್ಕೆ ತನ್ನ ತಲೆ ಕೂದಲನ್ನೇ ಬೋಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದು, ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಯುವತಿಯೊಬ್ಬಳು ತನ್ನ ಶೇವ್ ಮಾಡಿದ ತಲೆಯನ್ನು ತೋರಿಸುತ್ತಾ ಸಮಾಜ ಹಾಗೂ ಕುಟುಂಬದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾಳೆ. ನಾನು ಸತ್ಯ ಹೇಳಲು ಬಯಸುತ್ತೇನೆ ನಾನು ನನ್ನ ಕೂದಲಿಗೆ ಹೀಗೆ ಮಾಡಿದೆ ಎಂದು ಆಕೆ ಕೂದಲಿಲ್ಲದ ಬೋಳು ತಲೆಯಿಂದ ಟೋಫಿ ತೆಗೆದು ತೋರಿಸಿದ್ದಾಳೆ.
ನನಗೆ ನನ್ನ ಕೂದಲೆಂದರೆ ತುಂಬಾ ಪ್ರೀತಿ ಇತ್ತು. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಕೂದಲನ್ನು ಕತ್ತರಿಸುವುದು ನಿಜವಾಗಿಯೂ ನಾನು ಬಯಸಿದ ವಿಚಾರವಾಗಿರಲಿಲ್ಲ, ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ತುಂಬಾ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡ ಬರುತ್ತಿದ್ದರಿಂದ ಈ ಹೆಜ್ಜೆ ಇಡಬೇಕಾಯಿತು ನಾನೇನು ಮಾಡಲಿ ಎಂದು ಅವಳು ಹೇಳಿದ್ದಾಳೆ. ಹುಡುಗರು ಮಾಡಿದರೆ ಸರಿ ಹುಡುಗಿಯರು ಮಾಡಿದರೆ ತಪ್ಪು, ಜನ ನನ್ನನ್ನು ಗುರಾಯಿಸಿ ಗುರಾಯಿಸಿ ನೋಡುತ್ತಾರೆ. ಯಾಕೆ ಹಾಗೆ ನೋಡುತ್ತಾರೆ ನಾನು ಅಂತದ್ದೇನು ಮಾಡಿದೆ. ನನಗೂ ನನ್ನ ಕೂದಲಿನ ಮೇಲೆ ತುಂಬಾ ಪ್ರೀತಿ ಇತ್ತು. ಆದರೆ ಈ ಸಮಾಜದ ಕಾರಣದಿಂದ ನಾನು ಹೀಗೆ ಮಾಡಿದೆ. ನನ್ನನ್ನು ಬದುಕುವುದಕ್ಕೆ ಬಿಡುತ್ತಿರೋ ಇಲ್ಲವೋ, ನಾನು ಬದುಕಬೇಕೋ ಅಥವಾ ಬೇಡವೋ? ನನಗೆ ನನ್ನಿಷ್ಟದ ತಲೆಕೂದಲನ್ನು ಕತ್ತರಿಸುವಂತಹ ಸ್ಥಿತಿ ಬರುವಂತಹ ಇಷ್ಟೊಂದು ಒತ್ತಡ ಏಕೆ? ನನಗೆ ಇಲ್ಲಿ ಯಾರ ಸಿಂಪತಿಯೂ ಬೇಡ. ಆದರೆ ನಾನು ಇಷ್ಟು ಹೇಳಲು ಬಯಸುತ್ತೇನೆ. ಯಾರು ಹುಡುಗಿಯರು ಇಷ್ಟೊಂದು ಒತ್ತಡವನ್ನು ಅನುಭವಿಸುತ್ತಿದ್ದೀರೋ ಏನಾದರೊಂದು ಬದುಕಿನಲ್ಲಿ ಮಾಡಿ, ಒಂದು ವೇಳೆ ನಿಮ್ಮ ಜೀವನ ನಿಮ್ಮ ಕೈ ಜಾರಿ ಹೋಯ್ತು ಎಂದರೆ ಯಾರೊಬ್ಬರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ, ನಿಮಗೆ ಏನು ಮಾಡಬೇಕು ಅನಿಸುತ್ತದೋ ಅದನ್ನು ಮಾಡಿ ಮುಂದೆ ಬನ್ನಿ ಎಂದು ಅವರು ಆಕ್ರೋಶದಿಂದ ಮಾತನಾಡಿದ್ದಾರೆ.ವೀಡಿಯೋ ನೋಡಿದ ಅನೇಕರು ಆಕೆಯ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದ್ದಾರೆ. 3 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತನ್ನ ಕುಟುಂಬದವರ ಹೆಚ್ಚುತ್ತಿರುವ ವಿವಾಹ ಒತ್ತಡದಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ತಲೆ ಬೋಳಿಸಿಕೊಂಡಿದ್ದಾಗಿ ಬಹಿರಂಗಪಡಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಹಿಳೆಯರ ಮೇಲೆ ಇರಿಸಲಾಗಿರುವ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.@kajals_move_ ಎಂದು ಗುರುತಿಸಲಾದ ಬಳಕೆದಾರರು Instagram ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ಅನ್ನು ಈಗಾಗಲೇ ಸುಮಾರು 3.7 ಲಕ್ಷ ವೀಕ್ಷಣೆಗಳು ಗಳಿಸಿವೆ, ಅನೇಕ ಬಳಕೆದಾರರು ಅವರ ಜೀವನದ ಮೇಲೆ ಹಿಡಿತ ಸಾಧಿಸುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ನಿಮ್ಮ ಬಗ್ಗೆ ನಾವು ಸಿಂಪತಿ ತೋರಿಸುತ್ತಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ಸರಿಯಾಗಿ ಮಾಡಿದ್ದೀರಿ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಮತ್ತಿಬ್ಬರು ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರು ತಮಗಾಗಿ ದಿಟ್ಟವಾಗಿ ನಿಲ್ಲುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಇದೊಂದು ಒಳ್ಳೆಯ ಉಪಾಯ. ನಾನು ಇದನ್ನು ಮಾಡುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಪರಿಸ್ಥಿತಿಯೂ ಅದೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *