Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವನತಾರಾಕ್ಕೆ 50 ಚಿರತೆಗಳ ರವಾನೆ: ಮಹಾರಾಷ್ಟ್ರ ಸರ್ಕಾರದ ಮಹತ್ವದ ನಿರ್ಧಾರ

Spread the love

ಮುಂಬೈ: ಮಹಾರಾಷ್ಟ್ರ ಸರಕಾರವು ನೆರೆಯ ಗುಜರಾತಿನ ಜಾಮ್‌ನಗರ ಜಿಲ್ಲೆಯಲ್ಲಿರುವ ರಿಲಯನ್ಸ್ ಫೌಂಡೇಷನ್‌ನ ವನತಾರಾ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ 50 ಚಿರತೆಗಳನ್ನು ರವಾನಿಸಲು ನಿರ್ಧರಿಸಿದೆ ಎಂದು ರಾಜ್ಯದ ಅರಣ್ಯ ಸಚಿವ ಗಣೇಶ ನಾಯಕ್ ಅವರ ಆಪ್ತ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಮಾನವ-ಚಿರತೆ ಸಂಘರ್ಷಕ್ಕೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸುವುದರ ಜೊತೆಗೆ ಈ ವರ್ಗದ ಪ್ರಾಣಿಗಳ ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸಲು ಅರಣ್ಯ ಇಲಾಖೆಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಈ ಮೂಲಗಳು ತಿಳಿಸಿದವು.
ಮೂಲಗಳ ಪ್ರಕಾರ ನಾಯಕ್ ಮತ್ತು ವನತಾರಾ ಆಡಳಿತದ ನಡುವಿನ ಚರ್ಚೆಯ ಬಳಿಕ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.
ಅರಣ್ಯ ಇಲಾಖೆಯು ಚಿರತೆಗಳನ್ನು ಸ್ಥಳಾಂತರಿಸುವ ಸಮಯ ಮತ್ತು ವಿಧಾನಗಳ ಕುರಿತು ಹೆಚ್ಚಿನ ವಿವರಗಳನ್ನು ವನತಾರಾ ಆಡಳಿತದ ಜೊತೆ ಸಮನ್ವಯದೊಂದಿಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ಕೆಲವು ಭಾಗಗಳು 2025ರ ನವಂಬ‌ರ್ ಮತ್ತು ಡಿಸೆಂಬರ್‌ನಲ್ಲಿ ಸರಣಿ ಚಿರತೆ ದಾಳಿಗಳಿಗೆ ಸಾಕ್ಷಿಯಾಗಿದ್ದವು.


Spread the love
Share:

administrator

Leave a Reply

Your email address will not be published. Required fields are marked *