Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇವನಹಳ್ಳಿ ಬಳಿ ಭೀಕರ ದರೋಡೆ; ದೊಣ್ಣೆಯಿಂದ ಹೊಡೆದು ಲಕ್ಷಾಂತರ ಹಣದೊಂದಿಗೆ ಕಿರಾತಕರು ಪರಾರಿ.

Spread the love

ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ವ್ಯಕ್ತಿಯನ್ನು ಕರೆಸಿಕೊಂಡು 20 ಲಕ್ಷ ರೂ. ಹಣ ದೋಚಿದ (Robbery) ಘಟನೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ಎಂಬಾತನನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದೊಣ್ಣೆಯಿಂದ ಹೊಡೆದು, ಬ್ಯಾಗ್ ಕಸಿದು ಪರಾರಿ
ವಿಶ್ವಪ್ರಸಾದ್ ರೆಡ್ಡಿಗೆ ಕುಮಾರ್ ಎಂಬಾತ ಪರಿಚಯವಾಗಿ, ತಮ್ಮ ಬಳಿ ಕಡಿಮೆ ಬೆಲೆಗೆ ಸುಮಾರು 4 ಕೆಜಿ ಗೋಲ್ಡ್ ಕಾಯಿನ್ ಇದೆ ಎಂದು ಹೇಳಿ ಆಸೆ ಹುಟ್ಟಿಸಿದ್ದ. ಮೊದಲಿಗೆ ಒಂದು ಕೆಜಿ ಚಿನ್ನಕ್ಕೆ 20 ಲಕ್ಷ ರೂ. ನೀಡುವಂತೆ ಹೇಳಿದ ಹಿನ್ನೆಲೆಯಲ್ಲಿ ವಿಶ್ವಪ್ರಸಾದ್ ಚಿನ್ನ ಖರೀದಿಸಲು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆಂಧ್ರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಶ್ವಪ್ರಸಾದ್, ನಂತರ ಯಲಹಂಕದಿಂದ 20 ಲಕ್ಷ ರೂ. ಹಣದೊಂದಿಗೆ ಟ್ಯಾಕ್ಸಿಯಲ್ಲಿ ದೇವನಹಳ್ಳಿ ಕಡೆಗೆ ಪ್ರಯಾಣಿಸಿದ್ದಾರೆ.ಈ ವೇಳೆ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ವೆಂಕಟಗಿರಿಕೋಟೆ ಸಮೀಪದ ಖಾಸಗಿ ಲೇಔಟ್ ಬಳಿ ತಲುಪುತ್ತಿದ್ದಂತೆ ದುಷ್ಕರ್ಮಿಗಳ ಗ್ಯಾಂಗ್ ದಾಳಿ ನಡೆಸಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದೊಣ್ಣೆಗಳಿಂದ ವಿಶ್ವಪ್ರಸಾದ್ ಹಾಗೂ ಅವನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಶ್ವಪ್ರಸಾದ್ ಬಳಿ ಇದ್ದ ಹಣದ ಬ್ಯಾಗ್ ಹಾಗೂ ಮೊಬೈಲ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *