Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಯುದ್ಧ ವಿರೋಧಿಸಿ ಕಿರುಚಾಡಿದ ಮಾಜಿ ಸೈನಿಕ; ಸಭೆಯಿಂದ ಹೊರಕ್ಕೆ ಎಳೆದೊಯ್ದ ಭದ್ರತಾ ಪಡೆ

Spread the love

ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಯನ್ನು ಖಂಡಿಸಿ ಬುಧವಾರ ಸಶಸ್ತ್ರ ಸೇವೆಗಳ ಉಪಸಮಿತಿಯ ಅಧಿವೇಶನದ ಸಮಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರೊಬ್ಬರನ್ನು ಯುಎಸ್ ಸೆನೆಟ್ ನಿಂದ ಹೊರ ಹಾಕಲಾಗಿದೆ.
ಪ್ರತಿಭಟನಾಕಾರರನ್ನು ಬ್ರಿಯಾನ್ ಮೆಕ್ ಗಿನ್ನಿಸ್ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಅವರನ್ನು ಉತ್ತರ ಕೆರೊಲಿನಾದಲ್ಲಿ ಸೆನೆಟ್‌ಗೆ ಸ್ಪರ್ಧಿಸುತ್ತಿರುವ ಗ್ರೀನ್ ಪಾರ್ಟಿ ಅಭ್ಯರ್ಥಿ ಎಂದು ಹೇಳಿಕೊಂಡಿರುವುದು ಕಂಡು ಬಂದಿದೆ. ಮೆಕ್ ಗಿನ್ನಿಸ್ ಅಮೆರಿಕ ನೌಕಾಪಡೆಯ ಅಧಿಕಾರಿಯಂತೆ ಸಮವಸ್ತ್ರವನ್ನು ಧರಿಸಿರುವಂತೆ ಕಾಣುತ್ತಿದೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ ಮೆಕ್ ಗಿನ್ನಿಸ್ ಅವರನ್ನು ಕೊಠಡಿಯಿಂದ ಹೊರಗೆ ಕರೆದೊಯ್ಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಅವರು ಕೂಗುಡುತ್ತಿರುವುದು ಕಂಡು ಬಂದಿದೆ. “ಇಸ್ರೇಲ್‌ಗಾಗಿ ಯಾರೂ ಹೋರಾಡಲು ಬಯಸುವುದಿಲ್ಲ” ಎಂದು ಹೇಳುವುದು ಕೇಳಿಸಿದೆ.
ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯ ಮೊಂಟಾನಾ ಸೆನೆಟರ್ ಟಿಮ್ ಶೀಹಿ, ಮೆಕ್ ಗಿನ್ನಿಸ್ ಅವರ ಕೈ ಸಿಲುಕಿಕೊಂಡಿದೆ ಎಂದು ಇತರ ಪ್ರತಿಭಟನಾಕಾರರು ಕೂಗಿದಾಗ, ಸಹಾಯ ಮಾಡುವುದು ಕೂಡ ವೀಡಿಯೊದಲಿ ಕಂಡು ಬಂದಿದೆ.ವೀಡಿಯೊದಲ್ಲಿ ಮೆಕ್ ಗಿನ್ನಿಸ್ ಅವರನ್ನು ಕೊಠಡಿಯಿಂದ ಹೊರಗೆ ಕರೆದೊಯ್ಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಅವರು ಕೂಗುಡುತ್ತಿರುವುದು ಕಂಡು ಬಂದಿದೆ. “ಇಸ್ರೇಲ್‌ಗಾಗಿ ಯಾರೂ ಹೋರಾಡಲು ಬಯಸುವುದಿಲ್ಲ” ಎಂದು ಹೇಳುವುದು ಕೇಳಿಸಿದೆ.
ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯ ಮೊಂಟಾನಾ ಸೆನೆಟರ್ ಟಿಮ್ ಶೀಹಿ, ಮೆಕ್ ಗಿನ್ನಿಸ್ಟ್ ಅವರ ಕೈ ಸಿಲುಕಿಕೊಂಡಿದೆ ಎಂದು ಇತರ ಪ್ರತಿಭಟನಾಕಾರರು ಕೂಗಿದಾಗ, ಸಹಾಯ ಮಾಡುವುದು ಕೂಡ ವೀಡಿಯೊದಲ್ಲಿ ಕಂಡು ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *