ಮಂಗಳೂರು ಸಿಸಿಬಿ ಭಾರೀ ಕಾರ್ಯಾಚರಣೆ – 38 ಕೆಜಿ ಎಂಡಿಎಂಎ ವಶಕ್ಕೆ

ಮಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ ಪಿಡ್ಲಿಂಗ್ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು, 38 ಕೆಜಿ ಎಂಡಿಎಂಎ ವಶಕ್ಕೆ ಪಡೆದು ದೊಡ್ಡ ಮಾದಕ ಜಾಲವೊಂದನ್ನು ಭೇದಿಸಿದ್ದಾರೆ.
ಒಂದು ಡ್ರಗ್ ಪಿಡ್ಲರ್ನಿಂದ ಪ್ರಾರಂಭವಾದ ತನಿಖೆ
ಆರು ತಿಂಗಳ ಹಿಂದೆ, ಹೈದರ್ ಅಲಿ ಎಂಬಾತ ಡ್ರಗ್ ಪಿಡ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಾಗ, ತನಿಖೆ ನಡೆಸಿದ ಪೊಲೀಸರು ನೈಜೀರಿಯಾದ ಡ್ರಗ್ ಪಿಡ್ಲರ್ ಬಗ್ಗೆ ಮಾಹಿತಿ ಪಡೆಯುತ್ತಾರೆ. ಆತನನ್ನು ಬಂಧಿಸಿದ ನಂತರ 6 ಕೆಜಿ 300 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಯಿತು. ಇದರಿಂದ ಮಾದಕ ಜಾಲದ ದೊಡ್ಡ ಲಿಂಕ್ ಬಗ್ಗೆ ಮಾಹಿತಿ ಲಭಿಸಿತು.
ಸಿಸಿಬಿ ಪೊಲೀಸರ ಕಾರ್ಯಾಚರಣೆ
ಆರು ತಿಂಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು, ಡೆಲ್ಹಿಯಿಂದ ಮಾದಕ ದ್ರವ್ಯ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆಯುತ್ತಾರೆ. ಮಾದಕ ವಸ್ತುಗಳನ್ನು ಪ್ರತಿ 15 ದಿನಗಳಿಗೊಮ್ಮೆ ಆಫ್ರಿಕನ್ ಮತ್ತು ನೈಜೀರಿಯಾ ಮಹಿಳೆಯರು ಮಧ್ಯರಾತ್ರಿ ಕರ್ನಾಟಕಕ್ಕೆ ಪೂರೈಕೆ ಮಾಡುತ್ತಿದ್ದರು.
ಎರಡು ಆಫ್ರಿಕನ್ ಮಹಿಳೆಯರ ಬಂಧನ
ಮಾರ್ಚ್ 13ರಂದು ಸಂಜೆ, ಡೆಲ್ಹಿಯಿಂದ ಎರಡು ಆಫ್ರಿಕನ್ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ರಾತ್ರಿ 9 ಗಂಟೆಗೆ ಮಹಿಳೆಯರು ಡೆಲ್ಹಿಯಿಂದ ಬೆಂಗಳೂರು ತಲುಪಿದ ನಂತರ, ಬೆಳ್ಳಿಗಿರಿಂದ ಹನ್ನೆರಡು ಮೂವತ್ತರ ಹೊತ್ತಿಗೆ ಕ್ಯಾಬ್ ಹತ್ತಿದಾಗ ಪೊಲೀಸರು ಹಿಂಬಾಲಿಸಿದರು.
38 ಕೆಜಿ ಎಂಡಿಎಂಎ ವಶಕ್ಕೆ!
ಮಾರ್ಚ್ 14 ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಬ್ಬರು ಮಹಿಳೆಯರನ್ನು ಬಂಧಿಸಿ, ಅವರ ಪ್ರಯಾಣ ಸಾಧನ ತಪಾಸಣೆ ನಡೆಸಿದಾಗ 38 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಇದು ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಅತಿ ದೊಡ್ಡ ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.