Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿಥಿಲಗೊಂಡ ಬಸ್ ಅಡಿಭಾಗ ಕುಸಿದು ಚಕ್ರಕ್ಕೆ ಸಿಲುಕಿದ 7 ವರ್ಷದ ಬಾಲಕಿ ಸಾ*ವು

Spread the love

ಲಕ್ಕೊ: ಶಿಥಿಲಗೊಂಡ ಶಾಲಾ ಬಸ್ ನ ಅಡಿಭಾಗ ಕುಸಿದು ಬಿದ್ದು, ಎಂಟು ವರ್ಷದ ವಿದ್ಯಾರ್ಥಿನಿಯೊಬ್ಬಳು ಬಸ್ ನ ಹಿಂಬದಿಯ ಚಕ್ರಗಳಿಗೆ ಸಿಲುಕಿ ಮೃತಪಟ್ಟ ಘಟನೆ ಕಗ್ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ಬಾಲಕಿಯನ್ನು ಅನನ್ಯ ಎಂದು ಗುರುತಿಸಲಾಗಿದೆ.
ಈ ಘಟನೆಯಿಂದ ಇಡೀ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಈ ಘಟನೆಗೆ ಶಾಲೆ ಮತ್ತು ಚಾಲಕನ ಅಜಾಗರೂಕತೆಯ ಕಾರಣ ಎಂದು ಆರೋಪಿಸಿದ್ದಾರೆ. ಅವರು ಘಟನೆಗೆ ಕಾರಣವಾದ ಬಸ್ ಅನ್ನು ಧ್ವಂಸಗೊಳಿಸಿದ್ದು, ಬಸ್‌ ಚಾಲಕನನ್ನು ಹಿಡಿದು ಥಳಿಸಿದ್ದಾರೆ ಹಾಗೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.ಈ ಶಾಲಾ ಬಸ್‌ ಸಂಪೂರ್ಣವಾಗಿ ಶಿಥಿಲಗೊಂಡು ಯಾವುದಾದರೂ ದುರಂತಕ್ಕೆ ಕಾಯುತ್ತಿರುವಂತಿತ್ತು. ಅನನ್ಯ ಆಸೀನವಾಗಿದ್ದ ಆಸನದ ಬಳಿಯೇ ಹಿಂಬದಿ ಚಕ್ರಗಳ ಸ್ವಲ್ಪ ಮೇಲೆ ದೊಡ್ಡ ರಂಧ್ರವೊಂದು ಇತ್ತು. ಹೀಗಿದ್ದೂ, ಪ್ರತಿ ದಿನ ಸುಮಾರು 40 ಮಕ್ಕಳು ಈ ಬಸ್ ನಲ್ಲಿ ಸಂಚರಿಸುತ್ತಿದ್ದರು ಎಂದು ವರದಿಯಾಗಿದೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಅನನ್ಯ ಹಾಗೂ ಆಕೆಯ ಹಿರಿಯ ಸಹೋದರ ಯಾಜತ್ ಮನೆಗೆ ಮರಳುತ್ತಿದ್ದರು. ಬಸ್ ಬಿರ್ಹಾರ್ ಗ್ರಾಮವನ್ನು ಬಿಟ್ಟಾಗ, ಅನನ್ಯ ಕುಳಿತಿದ್ದ ಆಸನದ ಕೆಳಭಾಗ ಕುಸಿದಿದೆ. ಆಕೆ ಚಲಿಸುತ್ತಿದ್ದ ಬಸ್ ನಿಂದ ನೇರವಾಗಿ ತನ್ನೆದುರಿಗಿದ್ದ ರಂಧ್ರಂದೊಳಗೆ ಜಾರಿ ಬಿದ್ದಿದ್ದಾಳೆ. 10 ವರ್ಷದ ಬಾಲಕನಾಗಿರುವ ಆಕೆಯ ಸಹೋದರ ಈ ಘಟನೆಯನ್ನು ಕಂಡು ನೆರವಿಗಾಗಿ ಕೂಗಿಕೊಂಡಿದ್ದಾನೆ. ಆದರೆ, ಚಾಲಕನು ಬಸ್ ನಿಲ್ಲಿಸುವ ವೇಳೆಗೆ ಆತನ ಸಹೋದರಿಯ ಮೇಲೆ ಬಸ್ ನ ಹಿಂಬದಿಯ ಚಕ್ರಗಳು ಹರಿದಿವೆ ಎಂದು ವರದಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *