Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಿಯಕರನ ಕಾಮಕ್ಕೆ ಮಗಳನ್ನೇ ಬಲಿ ನೀಡಿದ ತಾಯಿ

Spread the love

ಬೆಂಗಳೂರು : ಪಕ್ಕದ ರಾಜ್ಯದ ತಮಿಳುನಾಡಿನ ಚೆನ್ನೈನಲ್ಲಿ ಹೆಣ್ಣಿನ ಕುಲಕ್ಕೆ ಅವಮಾನ ಮಾಡುವಂಥ ಘಟನೆ ನಡೆದಿದೆ. ಚೆನ್ನೈನ ಸಾಲಿಗ್ರಾಮಮ್‌ನಲ್ಲಿ ತಾಯಿಯೊಬ್ಬಳು ತನ್ನ 20 ವರ್ಷದ ಮಗಳಿಗೆ ನಿದ್ರೆ ಮಾತ್ರೆಯನ್ನು ನೀಡಿ, ಬಾಯ್‌ಫ್ರೆಂಡ್‌ಗೆ ಆಕೆಯನ್ನು ರೇ*ಪ್‌ ಮಾಡಲು ಅವಕಾಶ ನೀಡಿರುವ ದಾರುಣ ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆಯ ಗಂಡ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು ವಾರಕ್ಕೆ ಒಮ್ಮೆ ಮಾತ್ರವೇ ಮನಗೆ ಬರುತ್ತಿದ್ದ ಎಂದು ತಿಳಿಸಿದ್ದಾರೆ.

ಗಂಡ ವಾರಕ್ಕೆ ಒಮ್ಮೆ ಮಾತ್ರವೇ ಮನೆಗೆ ಬರುತ್ತಿದ್ದ ಕಾರಣಕ್ಕೆ ಮಹಿಳೆ ಅನೈತಿಕ ಸಂಬಂಧಕ್ಕೆ ಇಳಿದಿದ್ದಳು. ಗಂಡ ಇಲ್ಲದೇ ಇರುವ ಸಮಯದಲ್ಲಿ ಬಾಯ್‌ಫ್ರೆಂಡ್‌ ಜೊತೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆಕೆ ತನ್ನ ಬಾಯ್‌ಫ್ರೆಂಡ್‌ಅನ್ನು ಆಗಾಗ ಮನೆಗೆ ಬರುವಂತೆ ಹೇಳುತ್ತಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ತಾಯಿಯ ವರ್ತನೆಯ ಬಗ್ಗೆ ಮಹಳು ಆಕ್ಷೇಪ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಪದೇ ಪದೇ ಎಚ್ಚರಿಕೆ ನೀಡಿದ್ದಳು. ಆದರೆ, ಮಗಳ ಮಾತನ್ನು ತಾಯಿ ನಿರ್ಲಕ್ಷ್ಯ ಮಾಡಲು ಆರಂಭಿಸಿದಾಗ, ತಾಯಿಯ ಜೊತೆ ಮಾತನಾಡೋದನ್ನೇ ಮಗಳು ನಿಲ್ಲಿಸಿದ್ದಳು.
ಜನವರಿ 3ನೇ ತಾರೀಖಿನಂದು ಮಗಳು ಅಸ್ವಸ್ಥಳಾಗಿದ್ದ ಪರಿಸ್ಥಿತಿ ಇನ್ನಷ್ಟಯ ಹದಗೆಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಮಯದಲ್ಲಿ ತಾಯಿ, ಮಗಳಿಗೆ ನಿದ್ರೆ ಮಾತ್ರೆ ನೀಡಿದ್ದಲ್ಲದೆ, ತನ್ನ ಬಾಯ್‌ಫ್ರೆಂಡ್‌ಅನ್ನು ಮನೆಗೆ ಕರೆಸಿದ್ದಳು ಎನ್ನಲಾಗಿದೆ. ಈ ಹಂತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮಗಳ ಮೇಲೆ ಆಕೆಯ ಬಾಯ್‌ಫ್ರೆಂಡ್‌ ಅತ್ಯಾಚಾರ ಮಾಡಿದ್ದಾನೆ.ಆ ಬಳಿಕ 23 ರಂದು ಯುವತಿ ಮತ್ತೊಮ್ಮೆ ತೀವ್ರವಾಗಿ ಅಸ್ವಸ್ಥಳಾಗಿದ್ದಳು ಎಂದು ವರದಿಯಾಗಿದೆ. ಈ ಹಂತದಲ್ಲಿ ಮತ್ತೊಮ್ಮೆ ತಾಯಿ ನಿದ್ರೆ ಮಾತ್ರೆ ನೀಡಿ ತನ್ನ ಬಾಯ್‌ಫ್ರೆಂಡ್‌ಅನ್ನು ಮನೆಗೆ ಆಹ್ವಾನಿಸಿ ಇದೇ ಕೃತ್ಯವನ್ನು ಪುನರಾವರ್ತನೆ ಮಾಡುವಂತೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಬಾರಿ ಲೈಂಗಿಕ ದೌರ್ಜನ್ಯ ನಡೆಯುವ ಸಮಯದಲ್ಲೇ 20 ವರ್ಷದ ಯುವತಿ ಎಚ್ಚರಗೊಂಡಿದ್ದಳು. ಕಿರುಚಾಡಿ ಆಕ್ರೋಶ ವ್ಯಕ್ತಪಡಿಸಿದ್ದಳು. ಈ ಹಂತದಲ್ಲಿ ತಾಯಿ ಆಕೆಯನ್ನು ಬೆದರಿಸಿ ಕೋಣೆಯೊಳೆಗೆ ಕೂಡಿ ಹಾಕಿದ್ದಳು ಎಂದು ಆರೋಪಿಸಲಾಗಿದೆ.


ಮನೆಯೊಂದ ತಪ್ಪಿಸಿಕೊಂಡು ಓಡಿಹೋಗಿದ್ದ ಯುವತಿ
ಫೆ.9 ರಂದು ಸಂತ್ರಸ್ತೆ ತಪ್ಪಿಸಿಕೊಂಡು ತಿರುವಣ್ಣಾಮಲೈನಲ್ಲಿರುವ ಸಂಬಂಧಿಕರ ಮನೆಗೆ ಓಡಿಹೋದಳು. ಆಕೆ ತನ್ನ ಕುಟುಂಬದವರೊಂದಿಗೆ ದೌರ್ಜನ್ಯದ ವಿವರಗಳನ್ನು ಹಂಚಿಕೊಂಡಳು. ಆಕೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರಿಂದ, ಅವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಹಲ್ಲೆಗಳಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆಂದು ವೈದ್ಯರು ದೃಢಪಡಿಸಿದ್ದಾರೆಂದು ವರದಿಯಾಗಿದೆ.
ನಂತರ ಸಂಬಂಧಿಕರು ಸೆಯ್ಯಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ತಾಯಿ ಮತ್ತು ಆಕೆಯ 50 ವರ್ಷದ ಬಾಯ್‌ಫ್ರೆಂಡ್‌ ದಕ್ಷಿಣಮೂರ್ತಿ ವಿರುದ್ಧ ದೂರು ದಾಖಲಿಸಿದರು. ವಡಪಳನಿಯಲ್ಲಿ ಅಪರಾಧ ನಡೆದ ಕಾರಣ, ಪ್ರಕರಣವನ್ನು ವಡಪಳನಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಭಾನುವಾರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೂರ್ಣ ತನಿಖೆ ಆರಂಭಿಸಿದ್ದಾರೆ.
ಮೆಡಿಕಲ್‌ ಟರ್ಮಿನೇಷನ್‌ ಮಾಡಿದ ವೈದರು
ಪೊಲೀಸರ ಪ್ರಕಾರ, ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ತಿರುವಣ್ಣಾಮಲೈನ ಚೆಯ್ಯಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯರು ಆಕೆ ಏಳು ವಾರಗಳ ಗರ್ಭಿಣಿ ಎಂದು ದೃಢಪಡಿಸಿದರು ಮತ್ತು ಆಕೆಯ ಒಪ್ಪಿಗೆಯೊಂದಿಗೆ ವೈದ್ಯಕೀಯ ಗರ್ಭಪಾತವನ್ನು ಮಾಡಿದರು. ಆಸ್ಪತ್ರೆಯ ಮಾಹಿತಿಯ ಆಧಾರದ ಮೇಲೆ, ಚೆಯ್ಯಾರ್ ಮಹಿಳಾ ಪೊಲೀಸರು ಜೀರೋ ಎಫ್‌ಐಆರ್ ದಾಖಲಿಸಿ, ಅಪರಾಧಗಳು ತಮ್ಮ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ವಡಪಳನಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದರು.
 


Spread the love
Share:

administrator

Leave a Reply

Your email address will not be published. Required fields are marked *