ಗುಂಡೇಟು ಬಿದ್ದರೂ ಎದೆಗುಂದದ ಸಾಹಸಿ ಶ್ವಾನ: ಉಗ್ರರ ಬೇಟೆಯಲ್ಲಿ ‘ಟೈಸನ್’ ಪರಾಕ್ರಮ!

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಪೂರ್ವ ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ಇಂದು ಭಾರತೀಯ ಸೇನೆ (Indian Army) ಭರ್ಜರಿ ಬೇಟೆಯಾಡಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) (Jaish-e-Mohammed (JeM) ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಆದರೆ ಈ ಆಪರೇಷನ್ಗೆ ಸಾಥ್ ನೀಡಿದ್ದು ನಾಯಿ! ‘ಟೈಸನ್’ (Tyson) ಎಂಬ ಹೆಸರಿನ ಸೇನಾ ಸ್ನಿಫರ್ ಶ್ವಾನವು (sniffer dog) ಭದ್ರತಾ ಪಡೆಗಳು ಉಗ್ರರ ಸ್ಥಳವನ್ನು ಗುರುತಿಸಲು ಸಹಾಯ ಮಾಡಿತು. ಅಲ್ಲದೇ ತನ್ನ ಕಾಲಿಗೆ ಗುಂಡೇಟು ತಿಂದಿತ್ತು.

ಇಬ್ಬರು ಜೆಎಂಇ ಉಗ್ರರ ಹತ್ಯೆ
ಈ ನಾಯಿ ಗುಂಡು ತಿಂದರೂ ಕೂಡ ಅಂತಿಮವಾಗಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಟ್ರೂ ಪ್ರದೇಶದಲ್ಲಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡಗಳು ಬೆಳಿಗ್ಗೆ 10.30 ರ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಈ ಎನ್ಕೌಂಟರ್ ನಡೆಯಿತು.