Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೆಸರು ಬದಲಿಸಿ ವಿದೇಶಕ್ಕೆ ಹೋಗಿದ್ದ ರೌಡಿಶೀಟರ್ ಅರೆಸ್ಟ್

Spread the love

ಮಂಗಳೂರು/ ರಾಮನಗರ: ಆರೋಪಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಒಂದೆರಡಲ್ಲ ಬರೋಬ್ಬರಿ 31 ಕೇಸ್​ಗಳಿದ್ದರು ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಯನ್ನ ಕೊನೆಗೂ ಖಾಕಿ ಬಂಧಿಸಿದೆ. ರೌಡಿಶೀಟರ್ ಸಫ್ವಾನ್ ಹುಸೈನ್ (42) ಅರೆಸ್ಟ್​​ ಆದ ಆರೋಪಿಯಾಗಿದ್ದು, ಹೆಸರು ಬದಲಿಸಿಕೊಂಡು ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ರಂಜಾನ್​​ ಹಿನ್ನೆಲೆ ವಿದೇಶದಿಂದ ಈತ ಬಂದಿರುವ ಮಾಹಿತಿ ಆಧರಿಸಿ ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಈತನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಟಾರ್ಗೆಟ್ ಗ್ಯಾಂಗ್​​ನಲ್ಲಿ ಸಕ್ರಿಯನಾಗಿದ್ದ ರೌಡಿಶೀಟರ್ ಸಫ್ವಾನ್ ಹುಸೈನ್ ವಿರುದ್ಧ 2 ಕೊಲೆ, ಗ್ಯಾಂಗ್ ರೇಪ್, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 31 ಪ್ರಕರಣಗಳಿವೆ. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನದಲ್ಲಿಯೂ ಈತ ಭಾಗಿಯಾಗಿದ್ದ ಎನ್ನಲಾಗಿದೆ. ನಕಲಿ ಹೆಸರಿನಲ್ಲಿ ಆಧಾರ್ ಮಾಡಿಸಿ ಆಂಧ್ರ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಆರೋಪಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ಆದರೆ ಹಬ್ಬದ ಹಿನ್ನೆಲೆ ಈತ ದೇಶಕ್ಕೆ ಮರಳಿ ಬಂದಿರುವ ಮಾಹಿತಿ ಆಧಾರದಲ್ಲಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ರಾಯ್ ಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರ ತಂಡ ಸಫ್ವಾನ್ ಹುಸೈನ್​​ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *