Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ಯೂಟಿ ಫಿಲ್ಟರ್ ಮಾಯವಾಗಿ ಅಸಲಿ ಮುಖ ಕಂಡಿದ್ದೇ ತಡ, ಸ್ಟ್ರೀಮರ್‌ಗೆ ಬಿಗ್ ಶಾಕ್!

Spread the love

ಸೋಶಿಯಲ್ ಮೀಡಿಯಾ (social media )ದಲ್ಲಿ ಪರ್ಫೆಕ್ಷನ್ ತುಂಬಾ ಮುಖ್ಯ. ಇಲ್ಲಿ ಸೌಂದರ್ಯಕ್ಕೆ ಇಂಪಾರ್ಟೆನ್ಸ್ ಹೆಚ್ಚು. ನಿಮ್ಮ ನಿಜವಾದ ಸೌಂದರ್ಯವನ್ನು ಫಿಲ್ಟರ್ ಮಾಡ್ದೆ ಪೋಸ್ಟ್ ಮಾಡಿದ್ರೆ ನೋಡೋರ ಸಂಖ್ಯೆ ಬಹಳ ಅಪರೂಪ. ಫಾಲೋವರ್ಸ್ ಜಪ್ಪಯ್ಯ ಅಂದ್ರೂ ಹೆಚ್ಚಾಗೋದಿಲ್ಲ. ನೀವು ಇದ್ದಿದ್ದಕ್ಕಿಂತ ಮತ್ತಷ್ಟು ಸುಂದರವಾಗಿ ನಿಮ್ಮನ್ನು ತೋರಿಸಿದಾಗ್ಲೇ ಜನ ಲೈಕ್ ಒತ್ತುತ್ತಾರೆ, ಫಾಲೋ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅತೀ ಸುಂದರವಾಗಿ ಕಾಣೋರು ಎದುರಿಗೆ ಬಂದಾಗ ಗುರುತಿಸೋದು ಕಷ್ಟ. ನೀವೂ ಫಿಲ್ಟರ್ ಮಾಡಿ ವಿಡಿಯೋ ಪೋಸ್ಟ್ ಮಾಡ್ತಿದ್ರೆ, ಫಿಲ್ಟರ್ ಮಾಡಿ ಲೈವ್ ಸ್ಟ್ರೀಮ್ ಮಾಡ್ತಿದ್ರೆ ಸ್ವಲ್ಪ ಜಾಗ್ರತೆ ಇರಲಿ. ಎಚ್ಚರ ತಪ್ಪಿದ್ರೆ ಫಾಲೋವರ್ಸ್ ಕೈತಪ್ಪಿ ಹೋಗ್ಬಹುದು. ಇಲ್ಲಿ ನೀವು ನೀಡೋ ಕಂಟೆಂಟ್ ಗಿಂತ ನಿಮ್ಮ ಸೌಂದರ್ಯಕ್ಕೆ ಹೆಚ್ಚು ಬೆಲೆ. ಮೋಸ ಮಾಡ್ತಿದ್ದೀರಿ ಎಂಬುದು ಗೊತ್ತಾದ್ರೆ ಜನ ಮುಲಾಜಿಲ್ಲದೆ ವಾಪಸ್ ಹೋಗ್ತಾರೆ. ಅದಕ್ಕೆ ಚೀನಿ ಮಹಿಳೆ ಉತ್ತಮ ನಿದರ್ಶನ.

ಲೈವ್ ಸ್ಟ್ರೀಮ್ (live stream) ವೇಳೆ ಯಡವಟ್ಟು
ಆರಂಭದಿಂದಲೂ ನಿಮ್ಮ ನಿಜವಾದ ಮುಖ, ಬಣ್ಣವನ್ನು ಜನರಿಗೆ ತೋರಿಸಿ, ಮೆಚ್ಚುಗೆ ಗಳಿಸಿದ್ರೆ ಸಮಸ್ಯೆ ಇಲ್ಲ. ಆದ್ರೆ ಡಿಜಿಟಲ್ ತಂತ್ರಜ್ಞಾನ ಬಳಸಿ ಜನರನ್ನು ಮೋಸ ಮಾಡ್ತಿದ್ದು, ಏಕಾಏಕಿ ನಿಮ್ಮ ಬಣ್ಣ ಬಯಲಾದ್ರೆ ಮಾತ್ರ ಕಥೆ ಮುಗಿದಂತೆ. ಬಳುಕೋ ಬಳ್ಳಿ, ಮೃದು ಚರ್ಮ, ಹೊಳೆಯೋ ಮುಖ, ಮಿನುಗೋ ಕಣ್ಣಿನ ಚೀನಾ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಳು. ಆಕೆ ಸೌಂದರ್ಯಕ್ಕೆ ಜನ ಮರುಳಾಗಿದ್ದರು. ಲೈವ್ ಸ್ಟ್ರೀಮ್ ಮಾಡ್ತಿದ್ದ ಸ್ಟ್ರೀಮರ್ ಸಣ್ಣ ಯಡವಟ್ಟು ಮಾಡ್ಕೊಂಡಿದ್ದಾಳೆ. ಇದ್ರಿಂದ ಲಕ್ಷಾಂತರ ಫಾಲೋವರ್ಸ್ ಕಳೆದುಕೊಳ್ಳುವ ಸ್ಥಿತಿ ಬಂದಿದೆ.ವರದಿ ಪ್ರಕಾರ, ಚೀನಾದ ಮಹಿಳಾ ಸ್ಟ್ರೀಮರ್ ಒಬ್ಬರು, ಇಷ್ಟು ದಿನ ತನ್ನ ಫಾಲೋವರ್ಸ್ ಗೆ ಮೋಸ ಮಾಡ್ತಿದ್ದಳು. ಲೈವ್ ಸ್ಟ್ರೀಮ್ ಟೈಂನಲ್ಲಿ ಬ್ಯೂಟಿ ಫಿಲ್ಟರ್ ಬಳಸ್ತಿದ್ದಳು. ಆದ್ರೆ ಈಗ ಲೈವ್ ಸ್ಟ್ರೀಮ್ ವೇಳೆ ಬ್ಯೂಟಿ ಫಿಲ್ಟರ್ ಇದ್ದಕ್ಕಿದ್ದಂತೆ ಕೈಕೊಟ್ಟಿದೆ. ಲೈವ್ ನಲ್ಲಿದ್ದ ಮಹಿಳೆ ನಿಜವಾದ ಮುಖ ಬಹಿರಂಗವಾಗಿದೆ. ಇದನ್ನು ನೋಡಿದ ಫಾಲೋವರ್ಸ್ ಶಾಕ್ ಆಗಿದ್ದಾರೆ. ಅವರ ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಇದ್ರಿಂದ ನಿರಾಶೆಗೊಂಡಿದ್ದಾರೆ. ಅನ್ ಫಾಲೋ ಶುರು ಮಾಡಿದ್ದಾರೆ. ಬ್ಯೂಟಿ ಫಿಲ್ಟರ್ ಸಮಸ್ಯೆಯಿಂದ ಲೈವ್ ಸ್ಟ್ರೀಮರ್ ಈವರೆಗೆ 140,000 ಫಾಲೋವರ್ಸ್ ಕಳೆದುಕೊಂಡಿದ್ದಾರೆ.
ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾಮಾಣಿಕತೆ ಮತ್ತು ಡಿಜಿಟಲ್ ಸೌಂದರ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಕಾಣುವ ವಿಡಿಯೋ, ಫೋಟೋ ಸಂಪೂರ್ಣವಾಗಿ ನಿಜವಲ್ಲ, ಫಿಲ್ಟರ್ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ, ಇವು ಆನ್ಲೈನ್ ವ್ಯಕ್ತಿತ್ವದ ಒಂದು ಭಾಗವಾಗಿದೆ ಅಂತ ಬಳಕೆದಾರರು ಕಮೆಂಟ್ ಮಾಡ್ತಿದ್ದಾರೆ. ಮಹಿಳೆ ಹಾಗೆಯೇ ಚೆನ್ನಾಗಿದ್ಲು, ಫಿಲ್ಟರ್ ಅಗತ್ಯವಿರಲಿಲ್ಲ ಎಂಬುದು ಕೆಲವರ ಅಭಿಪ್ರಾಯ.ಸೋಶಿಯಲ್ ಮೀಡಿಯಾದಲ್ಲಿ ಬಳಸುವ ಈ ಬ್ಯೂಟಿ ಫಿಲ್ಟರ್ ಗಳು ಯುವಕರಲ್ಲಿ ಆತ್ಮವಿಶ್ವಾಸದ ಸಮಸ್ಯೆಗೆ ಕಾರಣವಾಗ್ತಿದೆ. ಯುವಕರು ತಮ್ಮ ನಿಜವಾದ ಸೌಂದರ್ಯ ತೋರಿಸಲು ನಾಚಿಕೊಳ್ತಿದ್ದಾರೆ. ಪ್ರತಿಯೊಂದಕ್ಕೂ ಫಿಲ್ಟರ್ ಬಳಕೆ ಅವರಿಗೆ ಅಭ್ಯಾಸವಾಗ್ತಿದೆ.


Spread the love
Share:

administrator

Leave a Reply

Your email address will not be published. Required fields are marked *