ಮದುವೆ ಮಂಟಪದಲ್ಲಿ ವರನ ಬಣ್ಣ ಬಯಲು: ವರನಾಗಿ ಬಂದಿದ್ದು ಟ್ರಾನ್ಸ್ಜೆಂಡರ್!

ಮದುವೆ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಹುಡುಗನನ್ನು ನಂಬಿಸಿ, ವಧುದಕ್ಷಿಣೆ ಪಡೆದು ಮದುವೆಯಾದ ಮೂರ್ನಾಲ್ಕು ದಿನಕ್ಕೆ ಹಣದೋಚಿ ಪರಾರಿಯಾಗುವ ಘಟನೆ ಕಾಮನ್ ಆಗ್ತಿದೆ. ಬರೀ ಹುಡುಗಿಯರು ಮಾತ್ರವಲ್ಲ ಹುಡುಗ್ರು ಕೂಡ ಮೋಸ ಮಾಡ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಟ್ರಾನ್ಸ್ಜೆಂಡರ್ ವರನೊಬ್ಬ, ವಧು ಬಾಳಿನಲ್ಲಿ ಆಟವಾಡಿದ್ದಾನೆ.


ವರನಾಗಿ ಬಂದಿದ್ದು ಟ್ರಾನ್ಸ್ಜೆಂಡರ್ !
ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಮದುವೆ ಶಾಸ್ತ್ರವೆಲ್ಲ ಮುಗಿದು ವಧು, ಗಂಡನ ಮನೆಗೆ ಹೋಗ್ಬೇಕು ಆ ಸಂದರ್ಭದಲ್ಲಿ ವರನ ಬಣ್ಣ ಬಯಲಾಗಿದೆ. ಇದ್ರಿಂದ ಮದುವೆ ಮನೆ ರಣರಂಗವಾಗಿ ಬದಲಾಗಿದೆ. ವರನ ಕಡೆಯವರು ಬರಿಗೈನಲ್ಲಿ ಮನೆಗೆ ಹೋದ್ರೆ ವಧು ಕಡೆಯವರು ಮೋಸಹೋದ ನೋವಿನಲ್ಲಿ ಕಣ್ಣೀರಿಡ್ತಿದ್ದಾರೆ.ಉತ್ತರ ಪ್ರದೇಶದ ಕೋಥಿ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯ ಹುಡುಗಿಯೊಬ್ಬಳ ಮದುವೆ ದಿನೌನಾದ ಪುರೆ ಗನೈ ಗ್ರಾಮದ ನಿವಾಸಿ ಭಾಗ್ಯಚಂದ್ರ ಅವರ ಮಗ ರಿಶು ಜೊತೆ ಆರು ತಿಂಗಳ ಹಿಂದೆ ನಿಶ್ಚಯ ಆಗಿತ್ತು. ರಿಶು ವಯಸ್ಸು 22 ವರ್ಷ. ಫೆಬ್ರವರಿ 13 ರಂದು ಮದುವೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಶುಕ್ರವಾರ, ದಿಬ್ಬಣ ಬ್ಯಾಂಡ್ ಜೊತೆ ಗ್ರಾಮಕ್ಕೆ ಬಂದಿದೆ. ವಧುವಿನ ಕುಟುಂಬ ಸೇರಿದಂತೆ ಇಡೀ ಗ್ರಾಮ ದಿಬ್ಬಣವನ್ನು ಸ್ವಾಗತಿಸಿತ್ತು. ನಂತರ ಮದುವೆ ಕಾರ್ಯಗಳು ಶುರುವಾಗಿದ್ದವು, ವರಮಾಲೆ ಸಮಾರಂಭ ನಡೆದಿತ್ತು. ಶನಿವಾರ ಸಪ್ತಪದಿ ತುಳಿದು, ವಿವಾಹ ಬಂಧನದಲ್ಲಿ ಇಬ್ಬರು ಬಂಧಿಯಾಗಬೇಕಿತ್ತು. ಬೆಳಗಿನ ಜಾವ ಎಲ್ಲ ಬದಲಾಯ್ತು. ವಧುವಿನ ಮದುವೆ ಕನಸು ಮುರಿದುಬಿತ್ತು. ಕಡೋಪುರದ ಮಂಗಳಮುಖಿಯರ ಗುಂಪು ಮದುವೆ ಮನೆಗೆ ಬಂದಿತ್ತು. ವರನನ್ನು ನೋಡಿ ಮಂಗಳಮುಖಿಯರ ಗುಂಪು ಶಾಕ್ ಆಯ್ತು. ವರ ಕೂಡ ಟ್ರಾನ್ಸ್ಜೆಂಡರ್ ಎನ್ನುವ ಸುಳಿವು ಮನೆಯವರಿಗೆ ಅಲ್ಲಿಯೇ ಸಿಕ್ತು.

ವರ, ಮಂಗಳಮುಖಿಯರಿಗೆ 25 ಸಾವಿರ ನೀಡಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದ. ಆದ್ರೆ ಅವರ ವರ್ತನೆ, ವಧು ಕುಟುಂಬಸ್ಥರಲ್ಲಿ ಅನುಮಾನ ಹೆಚ್ಚು ಮಾಡಿತ್ತು. ವರನ ಪರೀಕ್ಷೆಗೆ ವಧುವಿನ ಕುಟುಂಬಸ್ಥರು ಮುಂದಾಗ್ತಿದ್ದಂತೆ ವರ ಅದನ್ನು ವಿರೋಧಿಸಿದ್ದ. ನಂತ್ರ ಮಂಗಳಮುಖಿಯರ ಗುಂಪೇ ಸತ್ಯವನ್ನು ಬಾಯ್ಬಿಟ್ಟಿದೆ. ಆತ ಟ್ರಾನ್ಸ್ಜೆಂಡರ್ ಎನ್ನುವ ಸತ್ಯ ಎಲ್ಲರಿಗೂ ಗೊತ್ತಾಗಿದೆ.ವಿಷ್ಯ ಹೊರಗೆ ಬರ್ತಿದ್ದಂತೆ ವರನ ಕಡೆಯವರು ಒಬ್ಬೊಬ್ಬರಾಗಿ ಕಾಲ್ಕಿತ್ತಿದ್ದರು. ಟ್ರಾನ್ಸ್ಜೆಂಡರ್ ಜೊತೆ ರಿಶು ಸುತ್ತಾಡಿದ್ದ. ಅವನಿಗೆ ತಂದೆ – ತಾಯಿ ಇಲ್ಲ. ಚಿಕ್ಕಮ್ಮ ಜೊತೆ ಅವನು ಬೆಳೆದಿದ್ದ. ಎರಡು ಎಕರೆ ಜಮೀನಿದೆ ಅಂತ ಮನೆಯವರು ಹೇಳಿದ್ದರು. ಹುಡುಗನ ಆಕಾರ, ಜಮೀನು ನೋಡಿ ಮದುವೆ ನಿಶ್ಚಯಿಸಲಾಗಿತ್ತು. ಟ್ರಾನ್ಸ್ಜೆಂಡರ್ ಎನ್ನುವ ಸತ್ಯ ನಮಗೆ ಗೊತ್ತಿರಲಿಲ್ಲ ಎಂದು ವಧು ಕಡೆಯವರು ಹೇಳಿದ್ದಾರೆ.
ವರನನ್ನು ವಧು ಕಡೆಯವರು ಕೆಲ ಕಾಲ ಬಂಧಿಸಿಟ್ಟಿದ್ದರು. ಮದುವೆ ಖರ್ಚು ನೀಡುವಂತೆ ಒತ್ತಾಯ ಮಾಡಿದ್ದರು. ಮದುವೆ ಖರ್ಚನ್ನು ವರನ ಕಡೆಯವರು ನೀಡ್ತಿದ್ದಂತೆ ಮಂಗಳಮುಖಿಯರ ಗುಂಪು ರಿಶುವನ್ನು ತಮ್ಮ ಜೊತೆ ಕರೆದೊಯ್ದಿದೆ. ಪ್ರಕರಣ ದಾಖಲಿಸಿದ್ರೆ ಅವಮಾನ ಎನ್ನುವ ಕಾರಣಕ್ಕೆ ವಧು ಕಡೆಯವರು ಯಾವುದೇ ಪ್ರಕರಣ ದಾಖಲಿಸಲಿಲ್ಲ.