ಮದುವೆ ಹೆಸರಲ್ಲಿ ಮಂಕುಬೂದಿ: ಧಾರವಾಡದ ‘ಮೂರು ಹೆಸರಿನ’ ಸುಂದರಿ ಲಾಕ್!

ಧಾರವಾಡದ ಯುವತಿಯೊಬ್ಬಳು ಹೆಸರು ಬದಲಾಯಿಸಿಕೊಂಡು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸುಂದ್ರಿಯ ವೈಯ್ಯಾರಕ್ಕೆ ಮನಸೋತ ಓರ್ವ ಯುವಕ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದನು. ಪೋಷಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಯುವಕ ಬದುಕುಳಿದಿದ್ದಾನೆ.ಹೆಸ್ರು ಬದಲಿಸಿಕೊಂಡು ಮೋಸ
ಈ ಯುವತಿ ಐಶ್ವರ್ಯಾ, ರೇಣುಕಾ ಮತ್ತು ಆರೋಹಿ ಎಂಬ ಮೂರು ಹೆಸರುಗಳನ್ನಿಟ್ಟುಕೊಂಡು ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದಳು. ಪ್ರೀತಿಯ ಹೆಸರಿನಲ್ಲ ಯುವಕರಿಂದ ಹಣ ಪಡೆದುಕೊಳ್ಳುತ್ತಿದ್ದಳು. ಮದುವೆಯಾಗೋದಾಗಿ ನಂಬಿಸಿ ಯುವಕರಿಂದ ಲಕ್ಷ ಲಕ್ಷ ಹಣ ಪೀಕಿದ್ದಾಳೆ. ಈಕೆಯ ನಕಲಿ ಪ್ರೀತಿಯಲ್ಲಿ ಅಂಧನಾದ ಗುರು ವಕ್ಕಂದ್ ಎಂಬಾತ ಐಶ್ವರ್ಯನೇ ಬೇಕು ಎಂದು ಮನನೊಂದು ವಿಷ ಸೇವಿಸಿದ್ದನು.7 ಲಕ್ಷ ರೂಪಾಯಿ

ಇಷ್ಟು ಮಾತ್ರವಲ್ಲ ಮದುವೆಯಾಗೋದಾಗಿ ಹೇಳಿ ಗುರು ಬಳಿಯಲ್ಲಿ 7 ಲಕ್ಷ ರೂಪಾಯಿ ತೆಗೆದುಕೊಂಡಿದ್ದಳು. ಹಣ ಬರುತ್ತಿದ್ದಂತೆ ಐಶ್ವರ್ಯಾ ವರಸೆ ಬದಲಿಸಿದ್ದಳು. ಇದರಿಂದ ನೊಂದ ಗುರು, ವಿಷ ಸೇವಿಸಿದ್ದನು. ಈ ವಿಷಯ ತಿಳಿದು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಾಗ ಗುರು ಕುಟುಂಬಸ್ಥರು ಐಶ್ವರ್ಯಾಳನ್ನು ಲಾಕ್ ಮಾಡಿದ್ದಾರೆ. ಓಡಿ ಹೋಗ್ತಿದ್ದಾಕೆಯನ್ನು ಹಿಡಿದು ಥಳಿಸಿದ್ದಾರೆ.ಗಂಡನಿಂದ ಡಿವೋರ್ಸ್
ನನ್ನ ಮಗನನ್ನು ಮದುವೆ ಆಗಬೇಕು ಇಲ್ಲಾಂದ್ರೆ 7 ಲಕ್ಷ ರೂಪಾಯಿ ವಾಪಸ್ ಕೊಡಬೇಕು ಎಂದು ಗುರು ತಾಯಿ ರತ್ನವ್ವ ಹೇಳಿದ್ದಾರೆ. ಇನ್ನು ರತ್ನವ್ವ ಹೇಳುವ ಪ್ರಕಾರ, ಐಶ್ವರ್ಯಾಗೆ ಮದುವೆಯಾಗಿ ಒಂದು ಮಗುವಿದೆ. ಈಗ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದಾಳೆ. ಹೆಸರು ಬದಲಿಸಿಕೊಂಡು ಮೋಸ ಮಾಡ್ತಿದ್ದಾಳೆ ಎಂದು ಆರೋಪಿಸಿದ್ದಾರೆ.ಪೊಲೀಸರ ವಶಕ್ಕೆ
ಸಂಜು ದೊಡ್ಡಮನಿ ಎಂಬ ಯುವಕನಿಗೂ ಐಶ್ವರ್ಯಾ ಮೋಸ ಮಾಡಿದ್ದಾಳೆ. ಸದ್ಯ ಐಶ್ವರ್ಯಾಳನ್ನು ಗುರು ಪೋಷಕರು ಪೊಲೀಸರ ವಶಕ್ಕೆ ನೀಡಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.