ಚೀನಾದ ಸಾಲದ ಜಾಲದಲ್ಲಿ ಸಿಕ್ಕಿಬಿದ್ದ ಮಾಲ್ಡೀವ್ಸ್

ಆರ್ಥಿಕ ಹೊಡೆತಕ್ಕೆ ತತ್ತರಿಸಿದ ಮಾಲ್ಡಿವ್ಸ್ ಆರ್ಥಿಕ ಸಂಕಷ್ಟ ತಂದ ಚೀನ ಶ್ರೀಲಂಕದ ಬಳಿಕ ಮಾಲ್ಡಿವ್ಸ್ ಗೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ, ವಿದೇಶಿ ವಿನಿಮಯ ಮೀಸಲು ಕುಸಿದ ಪರಿಣಾಮ ಆರ್ಥಿಕ ಅಸ್ಥಿರತೆ ತಲೆತೂಗಿದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕು ಮತ್ತು ಪತ್ರಕರ್ತೆ ಚೀನಾದ ಸಾಲ ಪದ್ಧತಿ ಮತ್ತು ವ್ಯಾಪಾರ ನೀತಿಗಳಿಂದ ಮಾಲ್ಡೀವ್ಸ್ ನಲ್ಲಿ ಆರ್ಥಿಕ ಒತ್ತಡ ಉಂಟಾಗಿದೆ. ಮಾಲ್ಡೀವ್ಸ್ನ ಒಟ್ಟು ಸಾಲದ ಪ್ರಮಾಣವು 2018ರಲ್ಲಿ ಮೂರು ಬಿಲಿಯನ್ ಡಾಲರ್ ಗಳಿಂದ ಮಾರ್ಚ್ 2024 ರ ಒಳಗೆ 8.2 ಬಿಲಿಯನ್ ಗೆ ಏರಿದೆ, 2029ಕ್ಕೆ ಇದು 11 ಡಾಲರ್ ಗೆ ಏರಿಕೆ ಆಗಬಹುದು ಎಂಬ ಅಭಿಪ್ರಾಯ ಆರ್ಥಿಕ ತಜ್ಞರದು ಒಟ್ಟು ಸಾಲದಲ್ಲಿ ಮಾಲ್ಡಿವ್ಸ್ 3.4 ಡಾಲರನ್ನು ಬಾಹ್ಯವಾಗಿ ಪಡೆದುಕೊಂಡಿದೆ ಉಳಿದ ಮೊತ್ತವನ್ನು ಚೀನಾ ಮತ್ತು ಭಾರತದಿಂದ ಪಡೆದುಕೊಂಡಿದೆ. 2025 ರಲ್ಲಿ ಜಾರಿಗೆ ಬಂದ ಚೀನಾ ಮಾಲ್ಡಿ ವ್ಯಾಪಾರ ಒಪ್ಪಂದ ಮಾಲ್ಡಿವ್ಸ್ ನ ಆರ್ಥಿಕತೆಯ ಒತ್ತಡ ಕಡಿಮೆ ಮಾಡುವುದರ ಬದಲು ಬಿಕ್ಕಟ್ಟನ್ನು ಮತ್ತಷ್ಟು ಆಳ ಗೊಳಿಸಿದೆ ಎನ್ನಲಾಗಿದೆ.