Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಲೇಜು ಕ್ಯಾಂಪಸ್‌ನಲ್ಲಿ ಚೂರಿ ಇರಿತ! ವಿಟ್ಲದಲ್ಲಿ ಕ್ಷುಲ್ಲಕ ಕಾರಣಕ್ಕೆ ರಕ್ತಸಿಕ್ತವಾಯ್ತು ಸಹಪಾಠಿಗಳ ಜಗಳ

Spread the love

ವಿಟ್ಲ: ಸಹಪಾಠಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ವಿದ್ಯಾರ್ಥಿಗಳು ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ಘಟನೆ ಫೆ. 11ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಖಾಸಗಿ ಕಾಲೇಜಿನಲ್ಲಿ ಸಹಪಾಠಿಗಳಾದ ಹೇಮಂತ್ (19) ಮತ್ತು ಅಪ್ರಾಪ್ತ ಪ್ರಾಯದ ವಿಧ್ಯಾರ್ಥಿಯು ಗೆಳೆಯರಾಗಿದ್ದು, ಅವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಈ ವೇಳೆ ಹೇಮಂತ್ ತನ್ನ ಬಳಿಯಿದ್ದ ಪೆನ್ ಚಾಕುವಿನಿಂದ ಈ ಅಪ್ತಾಪ್ತ ವಿಧ್ಯಾರ್ಥಿಯ ಬೆನ್ನಿನ ಭಾಗಕ್ಕೆ ಇರಿದಿದ್ದಾನೆ.ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಜಗಳವನ್ನು ತಡೆಯಲು ಯತ್ನಿಸಿದ ಮತ್ತೊಬ್ಬ ಅಪ್ರಾಪ್ತ ವಿಧ್ಯಾರ್ಥಿಗೆ ಸ್ವಲ್ಪ ಪ್ರಮಾಣದ ಗಾಯಗಳಾಗಿರುತ್ತದೆ. ಹೇಮಂತ್ ನ್ನು ವಶಕ್ಕೆ ಪಡೆಯಲಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ-32/2026 ಕಲಂ115(1) 352 109 118(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.


Spread the love
Share:

administrator

Leave a Reply

Your email address will not be published. Required fields are marked *