ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ ಮ್ಯಾರೇಜ್; ಠಾಣೆ ಮೆಟ್ಟಿಲೇರಿದ ವಿವಾದ!

ಪುತ್ತೂರು: ಹಿಂದೂ ಯುವತಿಯೊಬ್ಬಳು (Hindu girl) ಮುಸ್ಲಿಂ ಯುವಕನೊಂದಿಗೆ (Muslim man) ರಿಜಿಸ್ಟರ್ ಮ್ಯಾರೇಜ್ (registered marriage) ಆಗಿದ್ದು, ಇದೊಂದು ಲವ್ ಜಿಹಾದ್ (love jihad) ಅಂತ ಹಿಂದೂ ಪರ ಸಂಘಟನೆಗಳು (pro-Hindu organization) ಆರೋಪಿಸಿವೆ. ಯುವತಿ ಕಾಸರಗೋಡಿನ (Kasaragod) ಮೀಪುಗುರಿ ಪ್ರದೇಶದ ನಿವಾಸಿಯಾಗಿದ್ದು, ಕೇರಳದ (Kerala) ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದಾಳೆ. ಇದೀಗ ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ ಅಂತ ಆರೋಪಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಯುವತಿ
ಕೇರಳದ ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಇರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ. ಅತ್ತ ಮೀಪುಗುರಿ ಮೂಲದ 23 ವರ್ಷದ ಯುವತಿ ಮಂಗಳೂರು ಸುರತ್ಕಲ್‌ನಲ್ಲಿರುವ ಕಾಲೇಜ್ ಒಂದರಲ್ಲಿ ಓದುತ್ತಾ ಇದ್ದಳು. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.
ವಯನಾಡಿನಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್
ಇಬ್ಬರು ಪ್ರೀತಿಸಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಇಬ್ಬರೂ ಕೇರಳದ ವಯನಾಡಿನಲ್ಲಿರುವ ರಿಜಿಸ್ಟರ್ ಆಫೀಸ್‌ನಲ್ಲಿ ಕಳೆದ ಜನವರಿ 31ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಅತ್ತ ಮಗಳು ರಿಜಿಸ್ಟರ್ ಮದುವೆಯಾಗುತ್ತಿದ್ದಂತೆ, ಇತ್ತ ಅದರ ಬಗ್ಗೆ ಬಗ್ಗೆ ಗೊತ್ತಾಗಿ ಆಕೆ ವಾಸ್ತವ್ಯವಿದ್ದ ಪಿಜಿಗೆ ಬಂದು ಆಕೆ ಪೋಷಕರು ವಿಚಾರಿಸಿದ್ದಾರೆ.