ಬೆಂಗಳೂರಲ್ಲಿ ಕುಡುಕ ಸುಂದರಿಯರ ಅಟ್ಟಹಾಸ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ‘ಡ್ರಂಕ್ ಅಂಡ್ ಡ್ರೈವ್’ ಹೈಡ್ರಾಮಾ! ಸಹಾಯ ಮಾಡಲು ಬಂದವನಿಗೇ ಹೆಲ್ಮೆಟ್ ಏಟು; ಯುವತಿಯರ ರಂಪಾಟಕ್ಕೆ ಪೊಲೀಸರೇ ಸುಸ್ತು.ಬೆಂಗಳೂರಿನ ರಸ್ತೆಗಳಲ್ಲಿ ಅಮಲೇರಿದ ಯುವತಿಯರ ಹೈಡ್ರಾಮಾ ಮಿತಿಮೀರುತ್ತಿದೆ. ಮದ್ಯದ ಅಮಲಿನಲ್ಲಿ ಬೈಕ್ ಚಲಾಯಿಸಿ ಅಪಘಾತ ಮಾಡಿದ್ದಲ್ಲದೆ, ಪ್ರಶ್ನಿಸಿದವರ ಮೇಲೆಲ್ಲಾ ಮೃಗಗಳಂತೆ ಎರಗಿದ ಇಬ್ಬರು ವಿದ್ಯಾರ್ಥಿನಿಯರ ವರ್ತನೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಬ್ಯಾನರ್ಘಟ್ಟ ರಸ್ತೆಯ ಲಿಜಾ ಮತ್ತು ಕೋರಮಂಗಲದ ಅಮ್ರಾನ್ ಮ್ಯಾಥ್ಯೂ ಎಂಬ ಇಬ್ಬರು ಯುವತಿಯರು ಕುಡಿದ ಅಮಲಿನಲ್ಲಿ ಬೈಕ್ ಓಡಿಸುತ್ತಾ ಅಹಮದ್ ಗುರ್ಕರ್ ಎಂಬುವವರ ಕ್ಯಾಬ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬಿದ್ದ ಯುವತಿಯರನ್ನು ಚಾಲಕ ಎಬ್ಬಿಸಲು ಹೋದಾಗ, ಕಾರಿಗೆ ಆದ ಹಾನಿಯ ಬಗ್ಗೆ ಕೇಳಿದ್ದಕ್ಕೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ.

ಯುವತಿಯರು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ತಡೆದ ಸಾರ್ವಜನಿಕರ ಮೇಲೂ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ 112 ಹೊಯ್ಸಳ ಸಿಬ್ಬಂದಿ ಬಂದಾಗ, ಪೊಲೀಸರನ್ನೂ ಬಿಡದೆ ಅವರೊಂದಿಗೂ ಸಂಘರ್ಷಕ್ಕಿಳಿದಿದ್ದಾರೆ.
ಬಲವಂತವಾಗಿ ಇಬ್ಬರನ್ನೂ ಹುಳಿಮಾವು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ತಡರಾತ್ರಿವರೆಗೂ ಇವರ ರಂಪಾಟ ಮುಂದುವರಿದಿದ್ದು, ನಂತರ ಪೋಷಕರನ್ನು ಕರೆಸಿ ಅವರಿಗೂ ಬುದ್ಧಿ ಹೇಳಲಾಗಿದೆ.
ಪೊಲೀಸರು ಯುವತಿಯರ ವಿರುದ್ಧ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಕಾನೂನಿನ ಅನ್ವಯ ನೋಟಿಸ್ ನೀಡಿ ಶನಿವಾರ ಬೆಳಗಿನ ಜಾವ 3 ಗಂಟೆಗೆ ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ.