Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟಿದ್ದ ಖದೀಮ ಅಂದರ್!

Spread the love

ಗುಜರಾತ್‌: ವಿಮಾನ ನಿಲ್ದಾಣಗಳಲ್ಲಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ, ಸಿಕ್ಕಿ ಬೀಳುತ್ತೇವೆ ಎಂಬ ಭಯ ಇದ್ದರೂ, ಈಗಾಗಲೇ ಅನೇಕರು ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದಿದ್ದರು ಜನ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುವ ಸಾಹಸವನ್ನು ಬಿಡುವುದೇ ಇಲ್ಲ, ದುರಾಸೆಗೆ ತುತ್ತಾಗಿ ಕಳ್ಳದಾರಿಯಲ್ಲಿ ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಇಲ್ಲಿ ಬಂದು ಚಿನ್ನವನ್ನು ಆಪರೇಷನ್ ಮಾಡಿ ತೆಗೆದರಾಯ್ತು ಎಂದು ಚಿನ್ನ ನುಂಗಿದವರೂ ಕೂಡ ಏರ್‌ಪೋರ್ಟ್‌ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಆದರೂ ವಿದೇಶದಿಂದ ಚಿನ್ನ ತರುವ ಸಾಹಸ ಮುಂದುವರೆಯುತ್ತಲೇ ಇದೆ. ದಿನವೂ ಹೊಸ ಹೊಸ ರೀತಿಯಲ್ಲಿ ಒಂದಿಲ್ಲೊಂದು ಸಾಹಸಗಳ ಮೂಲಕ ಖದೀಮರು ವಿದೇಶದಿಂದ ಭಾರತಕ್ಕೆ ಚಿನ್ನ ಸಾಗಣೆಗೆ ಯತ್ನಿಸುತ್ತಲೇ ಇದ್ದಾರೆ. ಅದೇ ರೀತಿ ಇಲ್ಲಿನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕನೋರ್ವ ಚಡ್ಡಿಯಲ್ಲಿ(ಒಳಉಡುಪು) ಚಿನ್ನ ತುಂಬಿಸಿ ತಂದಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ನಂತರ ಅಹ್ಮದಾಬಾದ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಚಡ್ಡಿ ಬಿಚ್ಚಿಸಿ ಚಡ್ಡಿಗೆ ಕತ್ತರಿ ಹಾಕಿದಾಗ ಸುಮಾರು 45 ಲಕ್ಷ ಮೌಲ್ಯದ ಚಿನ್ನ ಸಿಕ್ಕಿದೆ.

ಹೌದು ಮೇಲ್ನೋಟಕ್ಕೆ ಆತ ಧರಿಸಿದ್ದ ಚಡ್ಡಿಯಲ್ಲಿದ್ದ ಚಿನ್ನ ಬಟ್ಟೆಯಂತೆಯೇ ಕಾಣಿಸುತ್ತಿತ್ತು. ಆರಂಭಿಕ ತಪಾಸಣೆಯಲ್ಲಿ ಈತ ಸಿಕ್ಕಿಬಿದ್ದಿರಲಿಲ್ಲ, ಆದರೆ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬ ಗಾದೆಯಂತೆ ಈತನ ವರ್ತನೆ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿಸಿದ್ದು, ಆತನನ್ನು ಹಿಡಿದು ಒಳಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಆತ ಧರಿಸಿದ್ದ ಚಡ್ಡಿಯನ್ನು ಬಿಚ್ಚಿಸಿ ಕತ್ತರಿ ಹಾಕಿದಾಗ ಅಧಿಕಾರಿಗಳಿಗೆ ಅಲ್ಲಿ ನಿಧಿ ಸಿಕ್ಕಂತಾಗಿದೆ. ಹೌದು ಬರೋಬ್ಬರಿ 45 ಲಕ್ಷ ಮೌಲ್ಯದ ಚಿನ್ನ ಅದರಲ್ಲಿ ಇತ್ತು. ಈ ಚಿನ್ನವೂ ಸೇರಿದಂತೆ ಒಟ್ಟು 96 ಲಕ್ಷ ಮೌಲ್ಯದ ಚಿನ್ನವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಹ್ಮದಾಬಾದ್ ಏರ್‌ಪೋರ್ಟ್‌ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಪ್ರಯಾಣಿಕ ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಆಗಮಿಸಿದ್ದ. ವಿಮಾನ ನಿಲ್ದಾಣದ ಒಳಗೆ ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ಅಧಿಕಾರಿಗಳು ಆತನನ್ನು ತಡೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ತಪಾಸಣೆಯ ಸಮಯದಲ್ಲಿ, ಕಸ್ಟಮ್ಸ್ ತಂಡಕ್ಕೆ ಆ ಪ್ರಯಾಣಿಕನ ಒಳ ಉಡುಪಿನೊಳಗೆ ಪೇಸ್ಟ್ ರೂಪದಲ್ಲಿ ಇದ್ದ ಸುಮಾರು 45 ಲಕ್ಷ ರೂ. ಮೌಲ್ಯದ ಚಿನ್ನ ಸಿಕ್ಕಿದೆ. ಅದು ಮೇಲ್ನೋಟಕ್ಕೆ ಸಾಮಾನ್ಯ ಬಟ್ಟೆಯಂತೆ ಕಾಣುತ್ತಿತ್ತು ಮತ್ತು ತಕ್ಷಣಕ್ಕೆ ಅನುಮಾನ ಬರುತ್ತಿರಲಿಲ್ಲ, ಪ್ರಯಾಣಿಕ ಸಿಕ್ಕಿಬೀಳುವುದನ್ನು ತಪ್ಪಿಸಲು ಈ ವಿಚಿತ್ರ ವಿಧಾನವನ್ನು ಬಳಸಿಕೊಂಡು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಗೆ ಈತನಿಂದ 24 ಕ್ಯಾರೆಟ್ ಶುದ್ಧತೆಯ ಎರಡು ಪೂರ್ಣ ಚಿನ್ನದ ಬಾರ್‌ಗಳು ಮತ್ತು ಒಂದು ಕಟ್ ಬಾರ್ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಆತ ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ ಪರ್ಸ್‌ನಲ್ಲಿ ಯಾರಿಗೂ ಕಾಣದಂತೆ ಜಾಣತನದಿಂದ ಮರೆಮಾಡಿದ್ದ. 324.140 ಗ್ರಾಂ ತೂಗುತ್ತಿದ್ದ ಈ ಚಿನ್ನದ ಅಂದಾಜು ಮಾರುಕಟ್ಟೆ ಮೌಲ್ಯ 51,73,274 ರೂ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾಗೆಯೇ ಒಳುಡುಪಿನಲ್ಲಿ ಪೇಸ್ಟ್‌ನ ರೂಪದಲ್ಲಿ ಇದ್ದ ಚಿನ್ನವು ರಾಸಾಯನಿಕ ಸಂಸ್ಕರಣೆಯ ನಂತರ, 277.800 ಗ್ರಾಂ ಶುದ್ಧ ಚಿನ್ನ (24 ಕ್ಯಾರೆಟ್) ದ ತೂಕವಿತ್ತು, ಇದರ ಮೌಲ್ಯ ಸುಮಾರು 44,33,688 ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಒಬ್ಬ ವ್ಯಕ್ತಿಯಿಂದ ಒಟ್ಟು 96 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ, ಅಹಮದಾಬಾದ್ ಕಸ್ಟಮ್ಸ್ ಒಟ್ಟು 601.940 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮಾರುಕಟ್ಟೆ ಮೌಲ್ಯ 96,06,962 ಆಗಿದೆ. 1962 ರ ಕಸ್ಟಮ್ಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಆತನ ವಿರುದ್ಧ ಕೇಸ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಈ ಚಿನ್ನ ಸಾಗಣೆ ಜಾಲದಲ್ಲಿ ಈ ಚಿನ್ನವನ್ನು ಯಾರಿಗೆ ತಲುಪಿಸಬೇಕಿತ್ತು ಮತ್ತು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ನಿರ್ಧರಿಸಲು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *