ಕೂಡ್ಲು ಕೆರೆ ಸಮೀಪದ 100ಕ್ಕೂ ಹೆಚ್ಚು ಬಾಂಗ್ಲಾ ವಲಸಿಗರ ಶೆಡ್‌ಗಳು ಬೆಂಕಿಗೆ ಭಸ್ಮ!

ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್‌ಗೆ ಬೆಂಕಿ ಬಿದ್ದು 100ಕ್ಕೂ ಅಧಿಕ ಶೆಡ್‌ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ.

ಇಂದು ಬೆಳಗ್ಗೆ 5:30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ , ಹುಳಿಮಾವು , ಸರ್ಜಾಪುರ ಹಾಗು ಡೈರಿ ಸರ್ಕಲ್‌ನಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್ ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೈ ಟೆನ್ಷನ್ ವಯರ್ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.