ಸಿಗರೇಟು, ಗುಟ್ಕಾ ಪ್ರಿಯರಿಗೆ ಬೆಲೆ ಏರಿಕೆ ಬಿಸಿ

ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರುತ್ತಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.

ಈ ನಿಯಮ ಜಾರಿಗೆ ಬರುತ್ತಿದ್ದಂತೆ ಸಿಗರೇಟು ಹಾಗೂ ಪಾನ್ ಮಸಾಲಾ ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ ತಾಗಿದೆ
ಅದರಲ್ಲೂ ಸಿಗರೇಟು ಪ್ರಿಯರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಇದರ ಕುರಿತಾದ ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
2017ರ ಜುಲೈ 1ಕ್ಕೆ ಜಾರಿಗೆ ಬಂದ ಜಿಎಸ್‌ಟಿಯಲ್ಲಿ ಸಿಗರೇಟು ಮತ್ತು ಪಾನ್ ಮಸಾಲಾ ಮೇಲೆ ಹಾಲಿ ಇರುವ ಶೇ 28ರ ಜಿಎಸ್‌ಟಿ ಬದಲಾಗಲಿದೆ. ಆರೋಗ್ಯದ ಮೇಲೆ ಹಾನಿ ಮಾಡಬಹುದಾದ ಈ ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಕೂಡಾ ಈಗ ವಿಧಿಸಲಾಗಿದೆ.