ಗಂಡಂದಿರಿಗೆ ಗಾಳ ಹಾಕಿ ಲಕ್ಷಾಂತರ ಹಣ ದೋಚಿದ ಲೇಡಿ; ಕಿಲಾಡಿ ಮಹಿಳೆಯ ಮದುವೆ ಬೇಟೆ!

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬಳು ತನ್ನ ಗಂಡ ಬದುಕಿದ್ದರೂ ಸತ್ತು ಹೋಗಿದ್ದಾನೆ ಎಂದು ಮತ್ತೆರೆಡು ಮದುವೆಯಾಗಿರುವುದು (Marriage) ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ಮಹಿಳೆ 11 ವರ್ಷದ ಹಿಂದೆ ವೀರೇಗೌಡ ಎಂಬವರನ್ನು ಪ್ರೀತಿಸಿ (Love) ಮದುವೆಯಾಗಿದ್ದಳು. ಬಳಿಕ ಎರಡು ಮಕ್ಕಳಾದ ಮೇಲೆ ಗಂಡ ಸತ್ತು ಹೋಗಿದ್ದಾನೆ ಎಂದು ಹೇಳಿಕೊಂಡು, ಒಂದೂವರೆ ವರ್ಷದ ಹಿಂದೆ ಡೆಲಿವರಿ ಬಾಯ್ ಆಗಿದ್ದ ಅನಂತ್ ಎಂಬವರನ್ನು ಮದುವೆಯಾಗಿದ್ದಳು. ಅವರ ಬಳಿ 24 ಲಕ್ಷ ರೂ. ಹಣ ಪಡೆದು ಈಗ ಕನಕಪುರ ಮೂಲದ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ ಎನ್ನಲಾಗಿದೆ
ಮೋಸ ಹೋದ ಮೊದಲ ಹಾಗೂ ಎರಡನೇ ಗಂಡ ಸೇರಿ ದೊಡ್ಡಬೆಳವಂಗಲ ಪೊಲೀಸರ ಮೊರೆ ಹೋಗಿದ್ದಾರೆ