ಜಮೀನು ಜಗಳಕ್ಕೆ ಬಲಿಯಾದ ತಾಯಿ: ಮಗನಿಂದಲೇ ಹಡೆದವ್ವನ ಭೀಕರ ಹ*ತ್ಯೆ

ರಾಯಚೂರು : ರಾಯಚೂರಲ್ಲಿ (Raichur) ಭೀಕರ ದುರಂತ ಸಂಭವಿಸಿದ್ದು, ಆಸ್ತಿ (Property) ಆಸೆಗೆ ಹೆತ್ತಮ್ಮನನ್ನೇ ಪಾಪಿ ಪುತ್ರ ಹತ್ಯೆಗೈದಿದ್ದಾನೆ.

ಕುಮಾರ ತಾಯಿಯನ್ನೇ ಕೊಲೆ ಮಾಡಿ ಪರಾರಿಯಾದ ಪಾಪಿ ಮಗನಾಗಿದ್ದಾನೆ. ಮದ್ಯದ ನಶೆಯಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣತಮ್ಮಂದಿರಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ. ಇದೆ ದ್ವೇಷಕ್ಕೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಆಸ್ತಿ ವಿಚಾರಕ್ಕೆ ಆಗಾಗ್ಗೆ ಜಗಳ ಆಗುತ್ತಿತ್ತು. ಈ ಹಿಂದೆಯೂ ಹಲವು ಭಾರಿ ಕುಮಾರ ಹಲ್ಲೆಗೆ ಮುಂದಾಗಿದ್ದನು. ನಿನ್ನೆ ಮಾತಿನ ಚಕಮಕಿ ಹೆಚ್ಚಾಗಿ ಕೋಪದಿಂದ ತಾಯಿಯನ್ನೇ ಹತ್ಯೆ ಮಾಡಿದ್ದಾನೆ.
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಶವಾಗಾರಕ್ಕೆ ರವಾನಿಸಲಾಗಿದ್ದು,ಕೊಲೆ ಮಾಡಿ ಎಸ್ಕೇಪ್ ಆಗಿರೋ ಕುಮಾರನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.