Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಳಪತಿ ವಿಜಯ್ ಚಿತ್ರಕ್ಕೆ ‘ಪ್ರೈಮ್’ ಶಾಕ್: ಬಿಡುಗಡೆ ವಿಳಂಬ ಹಿನ್ನೆಲೆ ಕಾನೂನು ಕ್ರಮಕ್ಕೆ ಸಿದ್ಧತೆ!

Spread the love

ಜನ ನಾಯಗನ್ ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರ ಜನವರಿ 9ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಆದ ಸಮಸ್ಯೆಯಿಂದ ತೊಂದರೆ ಎದುರಾಗುತ್ತಿದೆ.ಸಿನಿಮಾ ರಿಲೀಸ್ ಆದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಫ್ಯಾನ್ಸ್ ಇದ್ದಾರೆ. ಈಗ ಚಿತ್ರ ಒಟಿಟಿ ಪ್ಲಾಟ್​​ಫಾರ್ಮ್ ಕಡೆಯಿಂದ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ‘ಜನ ನಾಯಗನ್’ ಸಿನಿಮಾ ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ. ಇದಾದ ಬಳಿಕ ಅವರು ರಾಜಕೀಯದ ಕಡೆ ಹೊರಳಲಿದ್ದಾರೆ. ಈಗಾಗಲೇ ಅವರು ಪಕ್ಷ ಕೂಡ ಆರಂಭಿಸಿದ್ದು, ಚುನಾವಣಾ ರ್ಯಾಲಿ ನಡೆಸುತ್ತಿದ್ದಾರೆ.

ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ ಅಮೇಜಾನ್ ಪ್ರೈಮ್ ವಿಡಿಯೋ ‘ಜನ ನಾಯಗನ್’ ಚಿತ್ರದ ಹಕ್ಕನ್ನು 120 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಸಿನಿಮಾದ ಮೂಲ ರಿಲೀಸ್ ದಿನಾಂಕ ಜನವರಿ 9. ಇದಕ್ಕೆ ಅನುಗುಣವಾಗಿ ಅಮೇಜಾನ್ ಅವರು ಒಟಿಟಿ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿರುತ್ತಾರೆ. ಆದರೆ, ಸಿನಿಮಾ ಇನ್ನೂ ಥಿಯೇಟರ್​​​ನಲ್ಲಿ ರಿಲೀಸ್ ಆಗಿಲ್ಲ. ಇದರಿಂದ ಒಟಿಟಿ ಸಂಸ್ಥೆ ಕಡೆಯಿಂದ ನಿರ್ಮಾಪಕರಿಗೆ ಒತ್ತಡ ಬರುತ್ತಿದೆ ಎಂದು ವರದಿ ಆಗಿದೆ.

ಅಮೇಜಾನ್ ಪ್ರೈಮ್ ವಿಡಿಯೋದವರು ಕಾನೂನಾತ್ಮಕವಾಗಿ ಹೋರಾಡಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಇಲ್ಲವಾದಲ್ಲಿ ಒಪ್ಪಂದದ ಮೊತ್ತದಲ್ಲಿ ಒಂದಷ್ಟು ಹಣವನ್ನು ಕಡಿತಗೊಳಿಸುವ ಸಾಧ್ಯತೆಯೂ ಇದೆ. ಈ ವಿಷಯದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದೇ ಇರುವ ವಿಷಯದಲ್ಲಿ ತಂಡದವರು ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಯೂ ತಂಡಕ್ಕೆ ಹಿನ್ನಡೆ ಆಗುತ್ತಿದೆ. ಒಂದೊಮ್ಮೆ ತಮಿಳುನಾಡು ಚುನಾವಣಾ ವಿಧಾನಸಭೆ ದಿನಾಂಕ ಘೋಷಣೆ ಆದರೆ, ಸಿನಿಮಾಗೆ ಹಿನ್ನಡೆ ಆಗಲಿದೆ. ಚಿತ್ರ ಪ್ರದರ್ಶನ ಅಸಾಧ್ಯವಾಗಬಹುದು. ಈ ಚಿಂತೆ ಕೂಡ ನಿರ್ಮಾಪಕರನ್ನು ಕಾಡುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *