Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್‌ಗೆ ಟ್ರಂಪ್ ವಾರ್ನಿಂಗ್: “ನನ್ನ ಹತ್ಯೆಗೆ ಸಂಚು ನಡೆಸಿದರೆ ಆ ದೇಶವನ್ನೇ ಅಳಿಸಿ ಹಾಕುತ್ತೇವೆ!”

Spread the love

ವಾಷಿಂಗ್ಟನ್‌: ನನ್ನ ಹತ್ಯೆಗೆ ಪ್ರಯತ್ನಗಳು ನಡೆದರೆ ಅಥವಾ ನನ್ನ ಹತ್ಯೆ ಮಾಡಿದ್ರೆ ಅಮೆರಿಕವು ಇರಾನ್‌ (Iran) ದೇಶವನ್ನ ಸರ್ವನಾಶ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ನೇರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರು ಖಮೇನಿಯವರ 40 ವರ್ಷಗಳ ಆಳ್ವಿಕೆಯನ್ನ ಕೊನೆಗೊಳಿಸಬೇಕೆಂದು ಕರೆ ನೀಡಿದ ಕೆಲವು ದಿನಗಳ ನಂತರ, ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲ್‌ ಖಮೇನಿ (Ayatollah Ali Khamenei) ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಇರಾನ್ ಮಂಗಳವಾರ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ

ನಮ್ಮ ನಾಯಕನ ಕಡೆಗೆ ಆಕ್ರಮಣಕಾರಿ ಕೈ ಚಾಚಿದರೆ, ನಾವು ಆ ಕೈಯನ್ನ ಕತ್ತರಿಸುವುದಲ್ಲದೆ, ಅವರ ಜಗತ್ತಿಗೂ ಬೆಂಕಿ ಹಚ್ಚುತ್ತೇವೆ ಎಂದು ಟ್ರಂಪ್‌ಗೆ ತಿಳಿದಿದೆ ಎಂದು ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಅಬೋಲ್ಫಜಲ್ ಶೇಕಾರ್ಚಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ತನ್ನ ಹತ್ಯೆಯ ಹಿಂದೆ ಇರಾನ್ ಕೈವಾಡವಿದ್ದರೆ, ಆ ದೇಶವನ್ನ ನಿರ್ಮೂಲನೆ ಮಾಡಲು ತನ್ನ ಸಲಹೆಗಾರರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಟೆಹ್ರಾನ್ ಮೇಲೆ ಗರಿಷ್ಠ ಒತ್ತಡ ಮರುಸ್ಥಾಪಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *