Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೈಜೀರಿಯಾ ಮೂಲದ ಕಿರಾತಕರ ಸ್ಕ್ಯಾಮ್ ಪತ್ತೆ; ಸಂತ್ರಸ್ತನಿಗೆ ‘ಗೋಲ್ಡನ್ ಅವರ್’ ವರ

Spread the love

ಬೆಂಗಳೂರು: ಸೈಬರ್​​ ವಂಚನೆ ಪ್ರಕರಣಗಳು ಮಾಮೂಲು ಎಂಬಷ್ಟರ ಮಟ್ಟಿಗೆ ಹೆಚ್ಚಿದ್ದು, ಕೋಟಿ ಕೋಟಿ ಹಣವನ್ನು ವಂಚಕರು ಲಪಟಾಯಿಸುವ ಕೇಸ್​​ಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಆದ್ರೆ ವಂಚನೆಗೆ ಒಳಗಾದವರು ತುರ್ತಾಗಿ ಈ ಬಗ್ಗೆ ಕೇಸ್​​ ದಾಖಲಿಸಿದಲ್ಲಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರಕರಣವೊಂದು ಸಾಬೀತು ಪಡಿಸಿದೆ. ಗೋಲ್ಡನ್​​ ಅವರ್​​ನಲ್ಲಿ ಕಂಪ್ಲೇಂಟ್​​ ನೀಡಿದ್ದ ಕಾರಣ ವಂಚಕರ ಪಾಲಾಗುತ್ತಿದ್ದ ಬರೋಬ್ಬರಿ 2.16 ಕೋಟಿ ಹಣ ಮರಳಿ ಕೈಸೇರಿದೆ.

ಘಟನೆ ಏನು?

ಗ್ರೂಪ್ ಫಾರ್ಮ್ ಮತ್ತು ರೆಡ್ಡೀಸ್ ಲ್ಯಾಬೋರೇಟರಿ ಎಂಬ ಕಂಪನಿಗಳ ನಡುವೆ ವ್ಯವಹಾರವಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ನಕಲಿ ಇಮೇಲ್ ಐಡಿ ಮೂಲಕ ಸೈಬರ್ ವಂಚನೆ ನಡೆಸಿದ್ದರು. ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಹೆಸರಲ್ಲಿ ರೆಡ್ಡೀಸ್ ಲ್ಯಾಬೋರೇಟರಿಗೆ ಇಮೇಲ್ ಬಂದಿದ್ದು, ಇದನ್ನು ಗಮನಿಸಿದ ರೆಡ್ಡೀಸ್ ಲ್ಯಾಬೋರೇಟರಿ 2.16 ಕೋಟಿ ರೂಪಾಯಿ ಹಣವನ್ನು ಪೇಮೆಂಟ್​​ ಮಾಡಿತ್ತು. ಹಣ ಪಾವತಿ ವಿಚಾರ ಗೊತ್ತಾಗಿದ್ದೇ ತಡ ಗ್ರೂಪ್ ಫಾರ್ಮಾ ಅಕೌಂಟೆಂಟ್ ಈ ಬಗ್ಗೆ ದೂರು ದಾಖಲಿಸಿದ್ದರು. ನೈಜೀರಿಯಾದಲ್ಲಿ ಕುಳಿತ ವಂಚಕನೋರ್ವ ನೀಡಿದ್ದ ಗುಜರಾತ್ ಮೂಲದ ಮಹಿಳೆ ಪಟೇಲ್ ದಕ್ಷ್ಯಾ ಬೆನ್ ಹೆಸರಿನ ನಕಲಿ ಖಾತೆಗೆ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಗೊತ್ತಾಗಿತ್ತು.

ಇನ್ನು ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ ದೂರು ಪಡೆದ ಒಂದೇ ಗಂಟೆಯಲ್ಲಿ ಅಕೌಂಟ್ ಜಾಲಾಡಿದ್ದ ಸೈಬರ್ ಕ್ರೈಮ್ ಪೊಲೀಸರು, ಹಣ ವರ್ಗಾವಣೆಯಾಗದಂತೆ ಅಕೌಂಟ್ ಫ್ರೀಜ್ ಮಾಡಿದ್ದರು. ಬಳಿಕ ಕೋರ್ಟ್ ಮೂಲಕ 2.16 ಕೋಟಿ ಹಣ ಬಿಡುಗಡೆಗೆ ಆದೇಶ ಪಡೆದು, ಹಣವನ್ನೀಗ ವಾಪಸ್​​ ನೀಡಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೈಬರ್​​ ವಂಚನೆ ಬಗ್ಗೆ ಡಿಸೆಂಬರ್​​ನಲ್ಲಿ ಕೇಸ್​​ ದಾಖಲಾಗಿತ್ತು. ಘಟನೆ ನಡೆದು 30 ನಿಮಿಷಗಳ ಒಳಗೆ ನಮಗೆ ದೂರು ಬಂದಿದ್ದು, ಈ ರೀತಿ ಗೋಲ್ಡನ್ ಅವರ್​​ನಲ್ಲಿ ಕಂಪ್ಲೇಂಟ್​​ ಕೊಟ್ಟರೆ ಅಕೌಂಟ್ ಫ್ರೀಜ್ ಮಾಡಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಕೌಂಟ್ ಹೋಲ್ಡರ್, ಅಕೌಂಟ್ ಕ್ರಿಯೇಟರ್ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *