Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕ್ ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್: 50 ಮಂದಿಯ ಹತ್ಯೆ

Spread the love

ಕರಾಚಿ/ ಇಸ್ಲಾಮಾಬಾದ್‌: ಬಲೂಚಿ ಬಂಡುಕೋರರು ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲನ್ನು ಅಪಹರಿಸಿದ್ದ ಪ್ರಕರಣ 2ನೇ ದಿನಕ್ಕೆ ಕಾಲಿರಿಸಿದ್ದು 50 ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾಗಿ ಬಂಡುಕೋರರು ಹೇಳಿದ್ದಾರೆ. ಇದೇ ವೇಳೆ, 30 ದಂಗೆಕೋರರನ್ನು ಪಾಕಿಸ್ತಾನದ ಭದ್ರತಾ ಪಡೆ ಹತ್ಯೆ ಮಾಡಿದೆ. ಒತ್ತೆಯಾಳಾಗಿದ್ದ 500 ಪ್ರಯಾಣಿಕರ ಪೈಕಿ 190 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿದ್ದ 37 ಮಂದಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ 250 ಜನ ರೈಲೊನೊಳಗೇ ಸಿಲುಕಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಇನ್ನು ಉಳಿದ ಪ್ರಯಾಣಿಕರ ಪ್ರಾಣ ಉಳಿಯಬೇಕು ಎಂದರೆ 20 ತಾಸಿನೊಳಗೆ (ಗುರುವಾರ ಸಂಜೆಯೊಳಗೆ) ಬಂಧಿತ ಬಲೂಚಿ ಕೈದಿಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುತ್ತೇವೆ ಎಂದು ಬಂಡುಕೋರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರೈಲಿನೊಳಗೆ ನುಗ್ಗಿದ ದಾಳಿಕೋರರು, ಪ್ರಯಾಣಿಕ ಬಳಿ ಆತ್ಮಹತ್ಯಾ ಬಾಂಬರ್‌ಗಳನ್ನು ನಿಲ್ಲಿಸಿ ಅವರನ್ನು ರಕ್ಷಣಾ ಕವಚಗಳಂತೆ ಬಳಸುತ್ತಿದ್ದು, ಮಕ್ಕಳು ಹಾಗೂ ಮಹಿಳೆಯರನ್ನು 3 ಸ್ಥಳಗಳಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಆದಕಾರಣ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಮುಂದುವರೆಯುತ್ತಿದ್ದು, ಇನ್ನೂ ರೈಲಿನೊಳಗಿರುವ ದಾಳಿಕೋರರನ್ನು ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *