ಬೀದರ್ ಕೋಟೆ ಮೇಲೆ ಸೂರ್ಯಕಿರಣ ಕಿರಣಗಳ ಚಿತ್ತಾರ!

ಬೀದರ್: ಇಲ್ಲಿನ ಐತಿಹಾಸಿಕ ಕೋಟೆ ಮೇಲೆ ಸಂಕ್ರಾಂತಿ ಹಬ್ಬದ ನಿಮಿತ್ತ ಸೂರ್ಯಕಿರಣ ತಂಡ ಆಕರ್ಷಕ ಏರ್‌ಶೋ (Air ನಡೆಯಿತು.


ಶುಕ್ರವಾರ (ಜ.16) ಮಧ್ಯಾಹ್ನ 3 ಗಂಟೆಗೆ ಬೀದರ್‌ನ ಐತಿಹಾಸಿಕ ಕೋಟೆ ಮೇಲೆ ಏರ್ ಶೋ ಪ್ರಾರಂಭವಾಯಿತು. 8 ಸೂರ್ಯಕಿರಣ ಯುದ್ಧ ವಿಮಾನಗಳಿಂದ ಹಾಗೂ ಏರ್‌ಪೋರ್ಸ್ ನುರಿತ ಪೈಲಟ್‌ಗಳಿಂದ ಏರ್ ಶೋ ನಡೆಯಿತು. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳುತ್ತಿರುವ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ತಿರಂಗ ಧ್ವಜ ಹಾಗೂ ಹೃದಯ ಸೇರಿದಂತೆ ಹಲವು ಆಕೃತಿಗಳನ್ನು ಏರ್ ಶೋದಲ್ಲಿ ಮೂಡಿಸಿದ್ದರು

ಏರ್ ಶೋ ವೇಳೆ ಡಿಸಿ ಶಿಲ್ಲಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಪ್ರತಿ ವರ್ಷದಂತೆ ಈ ವರ್ಷವು ಆಕರ್ಷಕ ಏರ್ ಶೋಗೆ ಐತಿಹಾಸಿಕ ಕೋಟೆ ಸಾಕ್ಷಿಯಾಗಿದೆ.
ಇನ್ನೂ ಏರ್ ಶೋ ಹಿನ್ನೆಲೆ ಮೂರು ಕಿಲೋಮೀಟರ್ ವ್ಯಾಪಿಯಲ್ಲಿ ಗಾಳಿಪಟ ಹಾರಾಟ ನಿಷೇಧಿಸಿ, ಅಪರ ಜಿಲ್ಲಾಧಿಕಾರಿ ಶಿವಾನಂದ.ಬಿ ಕರಾಳೆ ಅವರು ಆದೇಶಿಸಿದ್ದರು.