Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಗುವಿನ ಮುಖ ನೋಡುವ ಮೊದಲೇ ವಿಧಿಯಾಟ – ಯೋಧ ಪ್ರಮೋದ್ ಜಾಧವ್ ಇನ್ನು ನೆನಪು ಮಾತ್ರ!

Spread the love

ಸತಾರಾ: ಮಗಳ ಜನನದ ಸಂತಸದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಂದೆಯಾಗಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ದರೆ ಗ್ರಾಮದಲ್ಲಿ ನಡೆದಿದೆ.

ಮೃತ ಯೋಧನನ್ನು ಪ್ರಮೋದ್ ಪರಶುರಾಮ್ ಜಾಧವ್ ಎಂದು ಗುರುತಿಸಲಾಗಿದೆ. ಇವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿಯ ಹೆರಿಗೆಗಾಗಿ ಎಂಟು ದಿನಗಳ ಹಿಂದೆಯಷ್ಟೇ ರಜೆ ಪಡೆದು ಇವರು ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು. ಶುಕ್ರವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಮೋದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶನಿವಾರ ಮುಂಜಾನೆ ಒಂದು ಕಡೆ ಪ್ರಮೋದ್ ಅವರ ಪಾರ್ಥಿವ ಶರೀರ ಮನೆಗೆ ಬಂದಿದ್ದರೆ, ಮತ್ತೊಂದೆಡೆ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾಗಿ ಕೇವಲ ಎಂಟು ಗಂಟೆಗಳಾಗಿದ್ದರೂ, ಪತ್ನಿಯನ್ನು ಸ್ಟ್ರೆಚರ್ ಮೇಲೆಯೇ ತಂದು ಪತಿಯ ಅಂತಿಮ ದರ್ಶನ ಮಾಡಿಸಲಾಯಿತು. ಮಗುವನ್ನು ತಂದೆಯ ಪಾರ್ಥಿವ ಶರೀರದ ಪಕ್ಕದಲ್ಲಿ ಮಲಗಿಸಿ ಅಂತಿಮ ವಿದಾಯ ಹೇಳಿದ ದೃಶ್ಯ ಎಂತವರನ್ನೂ ಕಣ್ಣೀರು ಹಾಕಿಸುವಂತಿತ್ತು.

ನಂತರ ಸಕಲ ಸೇನಾ ಮತ್ತು ಸರ್ಕಾರಿ ಗೌರವಗಳೊಂದಿಗೆ ಪ್ರಮೋದ್ ಜಾಧವ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಸಾವಿರಾರು ಜನರು ಈ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.


Spread the love
Share:

administrator

Leave a Reply

Your email address will not be published. Required fields are marked *