Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೊರಗುಂಟೆಪಾಳ್ಯ-ನಾಯಂಡಹಳ್ಳಿ ಫ್ಲೈ ಓವರ್ ಈಗ ‘ಡೆತ್ ಝೋನ್’; ಸೂಚನಾ ಫಲಕವಿಲ್ಲದ ಹಂಪ್ಸ್‌ನಿಂದ ಸರಣಿ ಅಪಘಾತ!

Spread the love

Image credit: Google

ಬೆಂಗಳೂರು: ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru Traffic) ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಜೊತೆ ಅಪಘಾತಗಳ (Accident) ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅದರಲ್ಲೂ ರಿಂಗ್ ರೋಡ್ ಫ್ಲೈ ಓವರ್ ಆಕ್ಸಿಡೆಂಟ್ ಝೋನ್ ವಲಯವಾಗುತ್ತಿದೆ.

ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈ ಓವರ್‌ (Ring Road Flyover) ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೆ ನಮ್ಮೂರ ತಿಂಡಿಗೆ ಬರುವ ಮಾರ್ಗದ ಮೇಲೆ ತಿರುವ ಇರುವ ಕಾರಣ ವೇಗ ನಿಯಂತ್ರಣಕ್ಕೆ ಹಂಪ್ಸ್ ಅಳವಡಿಕೆ ಮಾಡಲಾಗಿದೆ. ಈ ಹಂಪ್ಸ್‌ ಬಗ್ಗೆ ಬಗ್ಗೆ ವಾಹನ ಸವಾರರಿಗೆ ಯಾವುದೇ ಮಾಹಿತಿ ಇಲ್ಲ. ಸೂಚನಾ ಫಲಕವಿಲ್ಲದ ಕಾರಣ ಅದರಲ್ಲೂ ರಾತ್ರಿಯಲ್ಲಿ ಬರುವ ವಾಹನ ಚಾಲಕರು ಹಂಪ್ಸ್‌ ಗೊತ್ತಾಗದೇ ಡಿವೈಡರ್‌ಗಳಿಗೆ ಗುದ್ದುತ್ತಿದ್ದಾರೆ. ಕೆಲ ವಾಹನಗಳು ಸ್ಕೀಡ್ ಆಗಿ ಬೀಳುತ್ತಿದ್ದು ಇದರಿಂದ ಸರಣಿ ಅಪಘಾತಗಳಾಗುತ್ತಿವೆ. 

ಈ ಅಪಘಾತಗಳಿಂದಾಗಿ ರಸ್ತೆಯ ಮಧ್ಯದ ಡಿವೈಡರ್ ಒಡೆದು ಬಿದ್ದಿದೆ. ವಾರಕ್ಕೆ ಕನಿಷ್ಠ 3 ಅಪಘಾತಗಳು ನಡೆಯುತ್ತಲೇ ಇರುತ್ತದೆ. ರಾತ್ರಿ ಹೊತ್ತು ಆಗುವ ಗದ್ದಲಗಳಿಂದ ಸುತ್ತಮುತ್ತಲಿನ ಮನೆಯವರಿಗೆ ನಿದ್ದೆಯಾಗ್ತಿಲ್ಲ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಪೀಡ್ ಲಿಮಿಟ್ ಕ್ಯಾಮೆರಾ ಅಳವಡಿಕೆ, ರಿಫ್ಲೆಕ್ಟ್ ಲೈಟ್ ಅಳವಡಿಕೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *