Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪ್ಪನ ಗಿಫ್ಟ್: ಭಾರತದಲ್ಲಿ ಮೂರನೇ ಶ್ರೀಮಂತ ಮಹಿಳೆ ರೋಷನಿ

Spread the love

ಎಚ್​​ಸಿಎಲ್ ಟೆಕ್ನಾಲಜೀಸ್​ನ ಛೇರ್ಮನ್ ರೋಷನಿ ಮಲ್ಹೋತ್ರಾ ಈಗ ಅಂಬಾನಿ, ಅದಾನಿ ಸಾಲಿಗೆ ಸೇರಿದ್ದಾರೆ. ದೇಶದ ಟಾಪ್-3 ಶ್ರೀಮಂತರಲ್ಲಿ ರೋಷನಿ ಒಬ್ಬರಾಗಿದ್ದಾರೆ. ಎಚ್​ಸಿಎಲ್ ಸಂಸ್ಥಾಪಕ ಶಿವ್ ನಾದರ್ ತಮ್ಮ ಶೇ. 47ರಷ್ಟು ಷೇರುಗಳನ್ನು ಏಕೈಕ ಮಗಳಾದ ರೋಷನಿಗೆ ಧಾರೆ ಎರೆದುಕೊಟ್ಟಿದ್ದಾರೆ. ಇದರೊಂದಿಗೆ ಕಂಪನಿಯ ನಿರ್ವಹಣೆಗೆ ಅಗತ್ಯ ಅಧಿಕಾರ ರೋಷನಿಗೆ ಪ್ರಾಪ್ತವಾಗಿದೆ.
ನವದೆಹಲಿ, ಮಾರ್ಚ್ 11: ನಿರೀಕ್ಷೆಯಂತೆ ಎಚ್​​ಸಿಎಲ್ ಟೆಕ್ನಾಲಜೀಸ್​ನ ಸಂಸ್ಥಾಪಕ ಶಿವ್ ನಾದರ್ ಅವರು ತಮ್ಮ ಮಗಳಿಗೆ ಕಂಪನಿಯ ಎಲ್ಲಾ ಅಧಿಕಾರ ಮತ್ತು ವ್ಯವಹಾರವನ್ನೂ ಒಪ್ಪಿಸಿದ್ದಾರೆ. ಎಚ್​ಸಿಎಲ್ ಕಾರ್ಪೊರೇಶನ್ ಮತ್ತು ವಾಮ ಸುಂದರಿ ಇನ್ವೆಸ್ಟ್​​ಮೆಂಟ್ಸ್ (Vama Sundari Investments) ಈ ಎರಡೂ ಸಂಸ್ಥೆಗಳಲ್ಲಿ ಬಹುಸಂಖ್ಯಾ ಷೇರು ಒಡೆತನ ಹೊಂದಿದ್ದ ಶಿವ ನಾದರ್ ಅವರು ಶೇ. 47ರಷ್ಟು ಷೇರುಗಳನ್ನು ಮಗಳಾದ ರೋಷನಿ ನಾದರ್ ಮಲ್ಹೋತ್ರಾಗೆ ವರ್ಗಾಯಿಸಿದ್ದಾರೆ. ನಾಲ್ಕೈದು ವರ್ಷದಿಂದ ಎಚ್​ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ಛೇರ್ಮನ್ ಅಗಿ ನಿಭಾಯಿಸುತ್ತಾ ಬಂದಿರುವ ರೋಷನಿ ಮಲ್ಹೋತ್ರಾಗೆ (Roshni Malhotra) ಈಗ ಸಂಸ್ಥೆಯನ್ನು ನಿಭಾಯಿಸುವ ಗರಿಷ್ಠ ಅಧಿಕಾರ ಸಿಕ್ಕಂತಾಗಿದೆ. ಹಾಗೆಯೇ, ಭಾರತದ ಮೂರನೇ ಅತಿಶ್ರೀಮಂತ ವ್ಯಕ್ತಿಯೂ ಎನಿಸಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಬಳಿಕ 42 ವರ್ಷದ ರೋಷನಿ ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಶಿವ್ ನಾದರ್ ಅವರಿಗೆ ಗಂಡು ಮಕ್ಕಳಿಲ್ಲ. ರೋಷನಿ ಏಕೈಕ ಪುತ್ರಿಯಾಗಿದ್ಧಾರೆ. ಹೀಗಾಗಿ, ವಾರಸುದಾರಿಕೆ ಯಾರಿಗೆ ಹೋಗಬೇಕೆಂಬುದು ಮೊದಲೇ ಸ್ಪಷ್ಟವಾಗಿತ್ತು. ಪದ್ಮಭೂಷಣ ಪ್ರಶಸ್ತಿಯ ಗೌರವ ಪಡೆದಿರುವ ಶಿವ ನಾದರ್ ಅವರ ಪತ್ನಿ ಕಿರಣ ನಾದರ್ ಅವರು ಕಲಾ ವಸ್ತುಗಳ ಸಂಗ್ರಹಣೆ, ದಾನ ಧರ್ಮಕಾರ್ಯಗಳಿಗೆ ಹೆಸರಾಗಿದ್ದಾರೆ. ಅವರು ಉತ್ತಮ ಕಾಂಟ್ರ್ಯಾಕ್ಟ್ ಬ್ರಿಡ್ಜ್ ಆಟಗಾರ್ತಿಯೂ ಹೌದು. 2018ರ ಏಷ್ಯನ್ ಗೇಮ್ಸ್​​ನಲ್ಲಿ ಕಂಚನ ಪದಕವನ್ನೂ ಜಯಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಒಮ್ಮಿಂದೊಮ್ಮೆ ಕರಗಿದ ಷೇರುಸಂಪತ್ತು ಭಾರತದ ಜಿಡಿಪಿಗೆ ಸಮ; ಯಾಕಿಷ್ಟು ಹೊಡೆತ?

ಎಚ್​​ಸಿಎಲ್ ಟೆಕ್ನಾಲಜೀಸ್ ಭಾರತದ ಮೊದಲ ಐಟಿ ಕಂಪನಿಗಳಲ್ಲಿ ಒಂದು. 1976ರಲ್ಲಿ ಶಿವ್ ನಾದರ್ ಈ ಕಂಪನಿಯನ್ನು ಸ್ಥಾಪಿಸಿದ್ದರು. ಭಾರತದಲ್ಲಿ ಐಟಿ ಕ್ಷೇತ್ರದ ಬೆಳವಣಿಗೆಯಲ್ಲಿ ಎಚ್​ಸಿಎಲ್ ಮಿಳಿತಗೊಂಡಿದೆ. 2020ರಲ್ಲಿ ರೋಷನಿ ನಾದರ್ ಅವರು ಕಂಪನಿಯ ಚೇರ್ಮನ್ ಆಗಿ ನೇಮಕವಾಗುವ ಮೂಲಕ ಅಪ್ಪನ ವ್ಯವಹಾರ ಮುಂದುವರಿಸಿಕೊಂಡು ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

1982ರಲ್ಲಿ ದೆಹಲಿಯಲ್ಲಿ ಜನಿಸಿದ ರೋಷನಿ ನಾದರ್, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ ಬಂದವರು. ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತ ಕಲಿತಿರುವ ರೋಷನಿ ಅವರು ಶಿಖರ್ ಮಲ್ಹೋತ್ರಾ ಎನ್ನುವವರನ್ನು ವರಿಸಿದ್ದಾರೆ. ಈ ದಂಪತಿಗೆ ಅರ್ಮಾನ್ ಮತ್ತು ಜಹಾನ್ ಎಂಬಿಬ್ಬರು ಗಂಡುಮಕ್ಕಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *