Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

14 ವರ್ಷದ ಬಾಲಕಿಗೆ ಪೋಷಕರಿಂದಲೇ ಬಾಲ್ಯ ವಿವಾಹ

Spread the love

ನವದೆಹಲಿ: 14 ವರ್ಷದ ಬಾಲಕಿಗೆ ಆಕೆಯ ಪೋಷಕರೇ ಬಲವಂತವಾಗಿ ಬಾಲ್ಯವಿವಾಹ ಮಾಡಿಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.

ಮಾಥೇಶ್ ಎನ್ನುವ 30 ವರ್ಷದ ಹುಡುಗ 7ನೇ ತರಗತಿಯ ಹುಡುಗಿಯೊಂದಿಗೆ ವಿವಾಹವಾಗಿದ್ದಾನೆ. 7ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ ತಾಯಿಯು ತನ್ನ ತಮ್ಮನೊಂದಿಗೆ ಮದುವೆ ಮಾಡಿಸಿದ್ದಾರೆ. ಬಾಲಕಿಯನ್ನು ಎತ್ತಿಕೊಂಡು ಹೋಗುವಾಗ ಆಕೆ ಕಿರುಚಾಡಿಕೊಂಡಿದ್ದಾಳೆ.

ಈ ಬಾಲ್ಯವಿವಾಹದಲ್ಲಿ ಭಾಗಿಯಾದ ಬಾಲಕಿಯ ಪೋಷಕರು, ಪತಿ, ಸೋದರಮಾವ ಮತ್ತು ಅತ್ತಿಗೆ ಸೇರಿದಂತೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಮದುವೆಯ ಬಳಿಕ ಆಕೆಯನ್ನು ಬಲವಂತವಾಗಿ ಮಾಥೇಶ್ ಮನೆಗೆ ಕರೆದೊಯ್ದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *