ಕುಳೂರು ರಸ್ತೆ ಪ್ರತಿಭಟನೆ ಮೇಲಿನ ಎಫ್ಐಆರ್ ಗೆ ಹೈಕೋರ್ಟ್ ರದ್ಧತಿ

ಮಂಗಳೂರು : ರಸ್ತೆ ದುರಸ್ಥಿಗೆ ಆಗ್ರಹಿಸಿ ಕೂಳೂರು ಬಳಿ ನಡೆಸಿದ ಪ್ರತಿಭಟನೆ ನಡೆಸಿದ ಸಮಾನ ಮನಸ್ಕ ಸಂಘಟನೆಯ ವಿರುದ್ಧದ ಎಫ್ ಐ ಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೂಳೂರು ಸೇತುವೆ ನಿರ್ಮಾಣ , ಸುರತ್ಕಲ್ ಟು ನಂತೂರು ರಸ್ತೆ ರಿಪೇರಿ ಸೇರಿದಂತೆ ರಸ್ತೆ ಸುರಕ್ಷತೆಯ ವಿಚಾರ ಮುಂಡಿಟ್ಟು ಪ್ರತಿಭಟನೆ ನಡೆಸಲಾಗಿತ್ತು.

2024 ನವೆಂಬರ್ 26 ರಂದು ಕೂಳೂರು ಸೇತುವೆ ಬದಿಯಲ್ಲಿ ನಡೆದಿದ್ದ ಈ ಪ್ರತಿಭಟನೆಗೆ ಇಲಾಖೆಯಿಂದ ಅನುಮತಿ ಪಡೆಯಲಾಗಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿತ್ತು. ಕಾವೂರು ಪೊಲೀಸರು ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಸುನಿಲ್ ಬಜಾಲ್ , ಮಂಜುಳಾ ನಾಯಕ್ ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.
ಈ ವಿಚಾರವಾಗಿ ಡಿವೈಎಫ್ ಐ ಹಾಗೂ ಸಮಾನ ಮನಸ್ಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರ ವಿರುದ್ಧ ಹಲವು ಸುತ್ತಿನ ಪ್ರತಿಭಟನೆ ನಡೆಸಿತ್ತು. ಜೊತೆಗೆ ಕಮಿಷನರ್ ಹಠಾವೋ ಅಂತ ಸರ್ಕಾರಕ್ಕೆ ಮನವಿಯನ್ನೂ ನೀಡಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಇದರ ಜೊತೆಗೆ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಿ ಎಫ್ ಐ ಆರ್ ದಾಖಲು ಮಾಡಿದ ವಿಚಾರವನ್ನು ಪ್ರಶ್ನೆ ಮಾಡಲಾಗಿತ್ತು. ಇದೀಗ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಎಫ್ ಐ ಆರ್ ಗೆ ತಡೆಯಾಜ್ಞೆ ನೀಡಿದ್ದು, ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೂ ತಡೆಯಾಜ್ಞೆ ನೀಡಿದೆ.

ಹೋರಾಟಗಾರರ ಮೇಲಿನ ಈ ಎಫ್ಐಆರ್ ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ಹೋರಾಟಗಾರರ ಪರವಾಗಿ ಹಿರಿಯ ನ್ಯಾಯವಾದಿ ಎಸ್ ಬಾಲನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜಸ್ಟೀಸ್ ಹೇಮಂತ್ ಚಂದನ್ ಗೌಡರ್ ಅವರು ಎಫ್ಐಆರ್ ಗೆ ತಡೆಯಾಜ್ಞೆ ನೀಡಿದ್ದಾರೆ.