Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೂರನೇ ಮಗುವಿಗೆ ಜನ್ಮ ನೀಡಿದರೆ ₹50,000 ಬಹುಮಾನ ಘೋಷಣೆ

Spread the love

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಎಷ್ಟೇ ಸೌಲಭ್ಯವನ್ನು ನೀಡಿದರೂ ತಮಗೆ ಒಂದೇ ಮಗು ಸಾಕು ಎನ್ನುವ ಕುಟುಂಬ ಇದೆ. ಅಬ್ಬಾಬ್ಬ ಎಂದರೆ ಎರಡು ಮಕ್ಕಳು. ಆದರೆ ಈ ಪ್ರದೇಶದಲ್ಲಿ ನೀವು ಮೂರನೇ ಮಗುವಿಗೆ ಜನ್ಮ ನೀಡಿದರೆ ಅಲ್ಲಿನ ಸಂಸದರು ವಿಶೇಷವಾದ ಬಹುಮಾನವೊಂದನ್ನು ಘೋಷಣೆ ಮಾಡಿದ್ದಾರೆ.

ಹೌದು.. ಮೂರನೇ ಮಗುವನ್ನು ಪಡೆಯುವ ಕುಟುಂಬಕ್ಕೆ ತೆಲುಗುದೇಶಂ ಪಕ್ಷದ ಸಂಸದ ಕಲಿಶೆಟ್ಟಿ ಅಪ್ಪಲನಾಯ್ಡು 50 ಸಾವಿರ ರೂಪಾಯಿ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮೊದಲಿಗೆ ಎರಡು ಮಕ್ಕಳನ್ನು ಹೊಂದಿದವರು ಮೂರನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ತಮ್ಮ ವೇತನದಲ್ಲಿ 50 ಸಾವಿರ ರೂಪಾಯಿ ಅಲ್ಲದೇ ಗಂಡು ಮಗುವಿಗೆ ಜನ್ಮ ನೀಡಿದರೆ ಹಸುವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸಂಸದರು ಹೇಳಿದ್ದಾರೆ.

ಈ ಬಗ್ಗೆ ಮಹಿಳಾ ದಿನಾಚರಣೆಯಂದು ಮಾತನಾಡಿದ ಅವರು, ಜನರಿಗೆ ಉತ್ತಮ ಭರವಸೆಯೊಂದನ್ನು ನೀಡಿದ್ದಾರೆ. ಸಂಸದರು ನೀಡಿದ ಭರವಸೆ ಬಗ್ಗೆ ವಿಡಿಯೋ ಕೂಡ ಸೋಷಿಯಾಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *