Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸ್ ಕಟ್ಟುನಿಟ್ಟಿನ ರೂಲ್ಸ್

Spread the love

ಮಂಗಳೂರು: ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇವುಗಳನ್ನು ಎಲ್ಲ ಕಾರ್ಯಕ್ರಮಗಳ ಆಯೋಜಕರು, ಸಾರ್ವಜನಿಕರು ಕಡ್ಡಾಯವಾಗಿಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ನೀಡಿದ್ದಾರೆ. ಮಾರ್ಗಸೂಚಿಗಳ ವಿವರ ಇಂತಿವೆ.

*ಅನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ಆಚರಣೆಗಳನ್ನು ಮಾಡಲು ಅವಕಾಶ ಇರುವುದಿಲ್ಲ.

*ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು,ಕಿರುಕುಳವಾಗದಂತೆ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಸೂಚಿಸಲಾಗಿದೆ.
*ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್‌ನ ನಡೆಸುವುದು, ಅಸಭ್ಯವರ್ತನೆ, ಸಾರ್ವಜನಿಕ ಕಿರುಕುಳದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು.

*ನಗರದಾದ್ಯಂತ ಬಂದೋಬಸ್ತ್ ಕರ್ತವ್ಯ ಬಗ್ಗೆ ಪಿಸಿಆರ್ ವಾಹನಗಳು, ಹೈವೇಪೆಟ್ರೋಲ್ ವಾಹನಗಳು, ಪಿಕೆಟಿಂಗ್ ಪಾಯಿಂಟ್, ಚೆಕ್ ಪೋಸ್ಟ್ ಮತ್ತು ರೌಂಡ್ಸ್ ಕರ್ತವ್ಯಕ್ಕೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾ ಗಿದ್ದು, ಹೆಚ್ಚುವರಿಯಾಗಿ ಸೂಕ್ಷ್ಮ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ, ಎಸ್‌ಎಎಫ್ ಹಾಗೂ ಸಿಎಆರ್‌ಪಿ ತುಕಡಿಗಳನ್ನುನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ದೂರುಗಳಿಗೆ 112 ಸಂಖ್ಯೆ ಕರೆ ಮಾಡಬಹುದು. 112ಸಂಖ್ಯೆಯು ಕರೆಗೆ ಲಭ್ಯವಾ ಗದೇ ಇದ್ದಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 0824-2220800 ಅಥವಾ 9480802321 ಗೆ ಕರೆಮಾಡ ಬಹುದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *