Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂತ್ರಾಲಯದಲ್ಲಿ ಭಕ್ತರ ಮಹಾಪೂರ: ಕ್ರಿಸ್‌ಮಸ್ ರಜೆ ಹಾಗೂ ಗುರುವಾರದ ಹಿನ್ನೆಲೆ ಮಠದಲ್ಲಿ ಕಿಕ್ಕಿರಿದು ತುಂಬಿದ ಜನ!

Spread the love

ರಾಯಚೂರು: ವರ್ಷದ ಕೊನೆ ಹಾಗೂ ರಜಾ ದಿನ ಹಿನ್ನೆಲೆ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠ ಹಿಂದೆಂದಿಗಿಂತಲೂ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಕ್ರಿಸ್‌ಮಸ್ ರಜೆ ಹಾಗೂ ಗುರುರಾಯರ ವಾರ ಇರುವುದರಿಂದ ಮಂತ್ರಾಲಯದಲ್ಲಿ ಜನಸಾಗರವೇ ಹರಿದುಬಂದಿದೆ.

ಸಾಮಾನ್ಯವಾಗಿ ರಜಾ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ, ಆದರೆ ಈಗ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದ್ದರಿಂದ ಭಕ್ತರಿಗೆ ಸೌಲಭ್ಯ ಒದಗಿಸಲು ಶ್ರೀಮಠ ಹರಸಾಹಸಪಡುತ್ತಿದೆ. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ಮಂಡಳಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ

ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆ ರಾಯರ ದರ್ಶನಕ್ಕೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಯಿತು. ಈಗಾಗಲೇ ಶ್ರೀಮಠದ ರೂಂಗಳು ಭರ್ತಿಯಾಗಿದ್ದು, ಡಿ.23ರಿಂದ 2026ರ ಜ.15ರವರೆಗೆ ಯಾವುದೇ ರೂಮ್‌ಗಳು ಲಭ್ಯವಿರುವುದಿಲ್ಲವೆಂದು ಮಠದ ಆಡಳಿತ ಮಂಡಳಿ ತಿಳಿಸಿದೆ. ರೂಂ ಬುಕ್ ಮಾಡದೇ ನೇರವಾಗಿ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಬಂದ ನೂರಾರು ಭಕ್ತರು ವಸತಿ ಸಮಸ್ಯೆ ಅನುಭವಿಸಬೇಕಾಯಿತು.


Spread the love
Share:

administrator

Leave a Reply

Your email address will not be published. Required fields are marked *