Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 8.85 ಲಕ್ಷ ಮೌಲ್ಯದ 60 ಕಳುವಾದ ಮೊಬೈಲ್ ಪತ್ತೆ!

Spread the love

ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8.85 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳ 60 ಮೊಬೈಲ್‌ಗಳನ್ನು ಪತ್ತೆಹಚ್ಚಿದ ಪೊಲೀಸರು ಅವುಗಳ ವಾರಸುದಾರರಿಗೆ ಮಂಗಳವಾರ ಹಸ್ತಾಂತರಿಸಿದರು.

ಉಡುಪಿಯಲ್ಲಿ ನಡೆದ ಸರಣಿ ಮೊಬೈಲ್​ ಕಳ್ಳತದಿಂದ ಉಡುಪಿ ಜನರು ಬೇಸತ್ತು. ಸಿಎಐಆರ್ ಪೋರ್ಟಲ್ ನಲ್ಲಿ ದೂರು ನೀಡಿದರು. ಇದೀಗ ಪೊಲೀಸರು ನಡೆಸಿದ ಕಾರ್ಯಚರಣೆಯಿಂದ ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದಿದ್ದಾರೆ. ನಗರ ಠಾಣೆ ಪೊಲೀಸರಿಂದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಿದ್ದಾರೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್​​ನು ಕಳೆದುಕೊಂಡವರಿಗೆ ವಾಪಸ್​​​ ನೀಡಿದ್ದಾರೆ. ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್​​ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಈ ದೂರಿನ ಆಧಾರ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಮೊಬೈಲ್​​​​​ ಹುಡುಕಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ., ನಗರ ಠಾಣೆಯಲ್ಲಿ ಕೆಎಸ್ಪಿ ಆ್ಯಪ್ ಮೂಲಕ ಮೊಬೈಲ್ ಕಳವಾದ ದೂರು ಗಳನ್ನು ಸ್ವೀಕರಿಸಲಾಗಿದ್ದು, ಅನಂತರ ಆ ಮೊಬೈಲ್‌ಗಳನ್ನು ಭಾರತ ಸರಕಾರದ ಸಿಇಐಆರ್ ಪೋರ್ಟಲ್ ಅಪ್ಲಿಕೇಶನ್ ಅಡಿಯಲ್ಲಿ ಬ್ಲಾಕ್ ಮಾಡಲಾಗಿತ್ತು ಎಂದರು.

ಇದೀಗ ಸಿಇಐಆರ್ ಪೋರ್ಟಲ್‌ನಲ್ಲಿ ಕಳೆದ 3 ತಿಂಗಳಲ್ಲಿ 60 ಮೊಬೈಲ್‌ಗಳನ್ನು ಪತ್ತೆಹಚ್ಚಿ ಅವುಗಳ ವಾರಸುದಾರರನ್ನು ಠಾಣೆಗೆ ಕರೆಸಿ ಇಂದು ಅವುಗಳನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಭು ಡಿ.ಟಿ. ನುಡಿದರು.


Spread the love
Share:

administrator

Leave a Reply

Your email address will not be published. Required fields are marked *