ಗಿಳಿ ರಕ್ಷಿಸಲು ಹೋಗಿ ಹೈಟೆನ್ಶನ್ ವಿದ್ಯುತ್ ಶಾಕ್: ಯುವಕ ಸಾವು

ಬೆಂಗಳೂರು: ಗಿಳಿ ರಕ್ಷಿಸಲು ಹೋಗಿ ಕರೆಂಟ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಗಿರಿನಗರದ (Girinagar) ಅಪಾರ್ಟ್ಮೆಂಟ್ ಬಳಿ ನಡೆದಿದೆ.


ಅರುಣ್ ಕುಮಾರ್ (23) ಮೃತ ದುರ್ದೈವಿ. ಅಪಾರ್ಟ್ಮೆಂಟ್ ಒಳಗಿನ ಹೈಟೆನ್ಸನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿ ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆ.
ಅಪಾರ್ಟ್ಮೆಂಟ್‌ನ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಡ್ಡಿ ಕಟ್ಟಿಕೊಂಡು ಕಂಬದ ಮೇಲೆ ಕುಳಿತಿದ್ದ ಗಿಳಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ 66 ಸಾವಿರ ಕೆವಿ ವೈರ್‌ನಿಂದ ಶಾಕ್ ತಗುಲಿದ್ದು, ಅರುಣ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರುಣ್‌ನ್ನು ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಬೆಸ್ಕಾಂ, ಕೆಇಬಿ, ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸುಮಾರು 2 ಲಕ್ಷ ರೂ. ಬೆಲೆಬಾಳುವ ಫಾರಿನ್ ಗಿಳಿ ಎಂದು ತಿಳಿದುಬಂದಿದೆ. ಈ ಸಂಬಂಧ ಗಿರಿನಗರ ಪೊಲೀಸರು ತನಿಖೆ ನಡೆಸಿದ್ದಾರೆ